

ಚಿತ್ರದುರ್ಗ: ನಗರದ ಛಲವಾದಿ ಮಹಾಸಂಸ್ಥಾನ ಗುರುಪೀಠದಲ್ಲಿ ಆ.26ರ ಬೆಳಗ್ಗೆ 11ಕ್ಕೆ ಜಿಲ್ಲಾ ಛಲವಾದಿ ಮಹಾಸಭಾದ ಸಭೆ ನಡೆಯಲಿದೆ.
ಶ್ರೀ ಬಸವನಾಗೀದೇವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ಸಭೆಯಲ್ಲಿ ಛಲವಾದಿ ಮಹಾ ಸಭಾದ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಸಮಿತಿಗಳ ರಚನೆ, ಸದಸ್ಯತ್ವ ನೋಂದಣಿ ಹಾಗೂ ಸಮುದಾಯದ ಸಂಘಟನೆ ಕುರಿತು ಚರ್ಚಿಸಲಾಗುವುದು.
ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಜ್ಯ ಜಂಟಿ ಕಾರ್ರ‌್ಯದರ್ಶಿ ಟಿ.ಆರ್.ನಾಗೇಶ್ ಕೋರಿದ್ದಾರೆ.