ಹಾನಿಗೀಡಾದ ಕುಟುಂಬಗಳಿಗೆ ಛಬ್ಬಿ ಸಹಾಯ ಹಸ್ತ

KLG CHABBI
Published on

ಕಲಘಟಗಿ: ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆರಾಯನ ಅಟ್ಟಹಾಸಕ್ಕೆ ತಾಲೂಕಿನಾದ್ಯಂತ ಮನೆಗಳು ಧರೆಗುಳಿವೆ. ಹಾನಿಯಾದ ಮನೆಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಭೇಟಿ ನೀಡಿದರು.

ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ 11 ಮನೆಗಳು ನೆಲಸಮವಾದ್ದರಿಮದ ಹಾನಿಗೊಳಗಾದ ಮನೆಗಳಿಗೆ ಸೋಮವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, ಕೆಲವು ಗ್ರಾಮಗಳಲ್ಲಿ ಬಡ, ಕೂಲಿ ಕಾರ್ವಿುಕರ ಮನೆಗಳು ಮಳೆಯಿಂದ ನೆಲಕ್ಕುರುಳಿವೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಬಡವರ ಜೀವನಕ್ಕೆ ನೆರವಾಗಬೇಕಿದೆ ಎಂದರು.

ಕುರುವಿನಕೊಪ್ಪ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ 11 ಕುಟುಂಬಗಳಿಗೆ ತಲಾ 5 ಸಾವಿರ ರೂ. ದಂತೆ ಸಹಾಯಧನ ನೀಡಿದರು.

ಉಮೇಶ ರಾಯನಾಳ, ಮುದುಕಪ್ಪ ದಾಸ್ತಿಕೊಪ್ಪ, ಸುರೇಶ ಮೇಟಿ, ಮಂಜುನಾಥ ಅಂಗಡಿ, ರಾಜು ಮೇಟಿ, ಮುದಕಪ್ಪ ಹೆಬ್ಬಾಳ, ಬಸವರಾಜ ಅಂಗಡಿ, ವೀರನಗೌಡ ಕುರಬಗಟ್ಟಿ, ಗುರುನಾಥ ದಾನವೇನವರ, ಕಿರಣ ಪಾಟೀಲಕುಲಕರ್ಣಿ, ಅರ್ಜುನ ಲಮಾಣಿ. ಮಲ್ಲೇಶ ಬಡಿಗೇರ ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net