ಚೆಟ್ಟಳ್ಳಿಯಲ್ಲಿ ಕಾವೇರಿ ತೀರ್ಥ ವಿತರಣೆ

18mdka1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮಂಗಳವಾರ ೧೨ ನೇ ವರ್ಷದ ಕಾವೇರಿ ತೀರ್ಥ ವಿತರಣಾ ಕಾರ್ಯ ನೆರವೇರಿತು.
ಸಹಕಾರ ಸಂಘದ ಮುಂದೆ ಪ್ರತಿಷ್ಠಾಪಿಸಲಾಗಿರುವ ಕಾವೇರಿ ಮಾತೆ ಪ್ರತಿಮೆಗೆ ಬೆಳಗ್ಗೆ ೯.೩೦ ಗಂಟೆಗೆ ವಿಶೇಷ ಅಲಂಕಾರದೊಂದಿಗೆ ಅರ್ಚಕ ರು ಕಾವೇರಿ ಸಂಕ್ರಮಣದ ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದ ವಿತರಣೆ ನಂತರ ತೀರ್ಥ ವಿತರಿಸಲಾಯಿತು.

ಸಂಘದಿಂದ ೧೨ ವರ್ಷ ಹಿಂದೆ ಸಂಘದಲ್ಲಿ ಕಾವೇರಿ ಪ್ರತಿಮೆ ಪ್ರತಿಷ್ಠಾಪಿಸಲಾಯಿತು. ಪ್ರತಿವರ್ಷ ಕಾವೇರಿ ಸಂಕ್ರಮಣದಿಂದ ಚೆಟ್ಟಳ್ಳಿಯಲ್ಲಿ ಕಾವೇರಿ ತೀರ್ಥ ವಿತರಣಾ ಕಾರ್ಯ ನೆರವೇರಿಸಲಾಗುತ್ತಿದೆ. ಈಬಾರಿಯೂ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಗಿದೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಣಿ ಉತ್ತಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net