ಮಣ್ಣಿನ ಆರೋಗ್ಯ ಸಂರಕ್ಷಣೆಯತ್ತ ಬೆಳೆಗಾರರ ಚಿತ್ತ ಅತ್ಯಗತ್ಯ

11mdkj1 - Copy
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಸುಂಟಿಕೊಪ್ಪ

ಕೊಡಗಿನ ಮಣ್ಣು ಪೋಷಕಾಂಶಗಳಿಂದ ಕೂಡಿದ ಚಿನ್ನವೇ ಆಗಿದೆ. ಈ ಮಣ್ಣಿನ ಆರೋಗ್ಯ ಸಂರಕ್ಷಣೆೆಯ ಮೂಲಕ ಜಿಲ್ಲೆಯ ಬೆಳೆಗಾರ ರು ಉತ್ತಮ ಕೃಷಿ ನಡೆಸಲು ಸಾಧ್ಯವಿದೆಯೆಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಉಪನಿರ್ದೇಶಕ ಚಂದ್ರಪ್ಪ ಅಭಿಪ್ರಾಯಿ ಸಿದರು.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಪ್ರಮುಖರೊಂದಿಗಿನ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆೆಯ ಮಣ್ಣು ಉತ್ತಮವಾಗಿದ್ದರು, ನಿರಂತರವಾದ ಮಳೆೆ ಮೊದಲಾದ ಕಾರಣಗಳಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಅಸಮತೋಲಿತವಾಗಿರುತ್ತದೆ. ಈ ಹಿನ್ನೆಲೆ ಬೆಳೆಗಾರರು ತಮ್ಮ ತೋಟದ ಮಣ್ಣಿನ ಪರೀಕ್ಷೆಯ ಮೂಲಕ, ಕೇಂದ್ರ ನೀಡುವ ಸಲಹೆ ಸೂಚನೆ ಆಧರಿಸಿ ಅಗತ್ಯ ಪೋಷಕಾಂಶಗಳನ್ನು ಮಣ್ಣಿಗೆ ಒದಗಿಸು ವುದು ಅತ್ಯವಶ್ಯ. ಯಾವುದೇ ಪರೀಕ್ಷೆಗಳಿಲ್ಲದೆ ಅನಗತ್ಯವಾಗಿ ಮಣ್ಣಿಗೆ ಹೆಚ್ಚಿನ ರಸಗೊಬ್ಬರ ನೀಡುವ ಮೂಲಕ ಮಣ್ಣು ಸತ್ತ್ವ ಕಳೆದು ಕೊಂಡು ಮಲಿನಗೊಳ್ಳದಂತೆ ಎಚ್ಚರ ವಹಿಸಬೇಕೆಂದರು.

ಬೆಳೆೆಗಾರರು ತಮ್ಮ ತೋಟದ ಮಣ್ಣನ್ನು ಕನಿಷ್ಠ ೩ ವರ್ಷಗಳಿಗೊಮ್ಮೆ ಪರೀಕ್ಷಿಸಿ, ಮಣ್ಣಿನ ಆಮ್ಲೀಯತೆಯ ಮಟ್ಟ ಸರಿಪಡಿಸಿಕೊಳ್ಳಬೇಕು. ಪೋಷಕಾಂಶ ಕೊರತೆಗೆ ತಕ್ಕಂತೆ ಅವುಗಳನ್ನು ಮಣ್ಣಿಗೆ ಒದಗಿಸಲು ಕ್ರಮ ಕೈಗೊಳ್ಳುವುದು ಅವಶ್ಯ. ಕಾಫಿ ತೋಟಗಳಲ್ಲಿ ಮಣ್ಣಿನ ಆಮ್ಲೀಯತೆಯ ಮಟ್ಟ ೬ ರಿಂದ ೬.೫ ರ ಒಳಗೆ ಇರುವುದು ಉತ್ತಮ. ಆಮ್ಲೀಯತೆಯ ಮಟ್ಟ ನಿಯಂತ್ರಿಸಲು ತೋಟಗಳಿಗೆ ಸುಣ್ಣ ಹಾಕುವುದು ಅತ್ಯವಶ್ಯವೆಂದರು.

ಚೆಟ್ಟಳ್ಳಿ ಸಂಶೋಧನಾ ಕೇಂದ್ರ ಜಿಲ್ಲೆಯ ಎಲ್ಲಾ ಸಣ್ಣ ಮತ್ತು ದೊಡ್ಡ ಬೆಳೆಗಾರಿಗೆ, ಅವರ ಕೃಷಿ ಸಮಸ್ಯೆ ಆಲಿಸಲು ಯಾವತ್ತೂ ಮುಕ್ತವಾಗಿರುತ್ತದೆ. ಸಂಶೋಧನಾ ಕೇಂದ್ರದ ಸಂಶೋಧನೆಗಳ ಉಪಯೋಗವನ್ನು ಬೆಳೆೆಗಾರರು ಪಡೆದುಕೊಳ್ಳಲು ಮುಂದೆ ಬರುವಂತೆ ಮನವಿ ಮಾಡಿದರು.

ಕೇಂದ್ರದ ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ ಮಾತನಾಡಿ, ಕಾಫಿ ತೋಟಗಳನ್ನು ನಿರಂತರವಾಗಿ ಬಾಧಿಸುವ ಸ್ಟೆಂ ಬೋರರ್ ಸೇರಿದಂತೆ ಇತರೆ ಯಾವುದೇ ಕೀಟ ಬಾಧೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದೇ ಹೊರತು, ಅದನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಅಸಾಧ್ಯ. ಹತ್ತಿ ಕೃಷಿಯಲ್ಲಿ ಕಂಡು ಬಂದ ಕೀಟ ಬಾಧೆ ನಿಯಂತ್ರಣಕ್ಕೆ ಬಿಟಿ ಹತ್ತಿ ತಳಿ ಅಭಿವೃದ್ಧಿ ಪಡಿಸಲಾಯಿತ್ತೆಂದರು.

ಇತ್ತೀಚಿನ ದಿನಗಳಲ್ಲಿ ಕಾಫಿ ಗಿಡಗಳ ಎಳೆಯ ರೆಂಬೆಗಳಿಗೆ ತಗಲುವ ಕೀಟ ಬಾಧೆ ಶಾರ್ಟ್ ಹೋಲ್ ಬೋರರ್ ನಿಯಂತ್ರಣಕ್ಕೆ ಕೇಂದ್ರ ಜೈಕೋಂ ಟ್ರಾಪ್ ಎನ್ನುವ ಕೀಟಗಳನ್ನು ಹಿಡಿದು ಕೀಟ ಬಾಧೆ ಹೋಗಲಾಡಿಸುವ ವಿಧಾನ ಆವಿಷ್ಕರಿಸಿದೆ. ಈ ಜೈಕೋಂ ಟ್ರಾಪ್‌ನ್ನು ಪ್ರತಿ ಏಕರೆ ಕಾಫಿ ತೋಟದಲ್ಲಿ ೧೨ ಸಂಖ್ಯೆಯಲ್ಲಿ ಅಳವಡಿಸಿದಲ್ಲಿ ಕೀಟ ಬಾಧೆ ನಿಯಂತ್ರಿಸಬಹುದಾಗಿದೆ. ೨೫ ಜೈಕೋಂ ಟ್ರಾಪ್‌ಗಳನ್ನು ಬೆಳೆಗಾರಿಗೆ ೭೫೦ ರೂ. ದರದಲ್ಲಿ ಒದಗಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.

ಕಾಫಿ ಗಿಡಗಳಲ್ಲಿ ಹೆಚ್ಚಾಗಿ ಕಂಡು ಬರುವ ಸ್ಟೆಂ ಬೋರರ್ ನಿಯಂತ್ರಣಕ್ಕೆ ಹುಳ ಹಿಡಿಯುವ ಟ್ರಾಪ್, ಕಾಯಿ ಕೊರಕ ಕೀಟಗಳ ನಿಯಂತ್ರಣಕ್ಕೆ ಬೋರಾ ಟ್ರಾಪ್‌ನ್ನು ನೂತನವಾಗಿ ಕಂಡು ಹಿಡಿಯಲಾಗಿದೆ. ಇದನ್ನು ಪ್ರತಿ ಏಕರೆಗೆ ೧೫ ರಂತೆ ಕಟ್ಟಬೇಕಾಗುತ್ತದೆ. ಈ ಬೋರಾ ಟ್ರಾಪ್ ೨೫ ಕ್ಕೆ ೬೦೦ ರೂ.ಗಳಂತೆ ಲಭ್ಯವಿದೆಯೆಂದರು.

ಯಾವುದೇ ತೋಟದಲ್ಲಿ ಕಂಡು ಬರುವ ಸ್ಟೆಂ ಬೋರರ್ ಪೀಡಿತ ಗಿಡಕ್ಕೆ ಬಟ್ಟೆಯನ್ನು ಸುತ್ತಿ ಕೀಟ ನಾಶಕ ಸಿಂಪಡಿಸಿ, ಕೀಟ ಬಾಧೆ ಯಿಂದ ಅದನ್ನು ಮುಕ್ತಗೊಳಿಸುವ ವಿಧಾನ ಕಂಡು ಹಿಡಿಯಲಾಗಿದೆ. ಕೇಂದ್ರ ಈಗಾಗಲೆ ಕೆಲ ತೋಟಗಳಲ್ಲಿ ಈ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿರುವ ಮಾಹಿತಿ ನೀಡಿದರು.

ಕೇಂದ್ರದ ಮಣ್ಣು ವಿಜ್ಞಾನಿ ರಾಜೀಬ್ ಪಾಟಿ ಮಾತನಾಡಿ, ಮಣ್ಣು ಪೋಷಕಾಂಶಗಳಿಂದ ಕೂಡಿ ಆರೋಗ್ಯಯುತವಾಗಿದ್ದಲ್ಲಿ, ಅಲ್ಲಿರುವ ಕೃಷಿ ರೋಗ ಬಾಧೆಯಿಂದ ಬಹುತೇಕ ಮುಕ್ತವಾಗಿರುತ್ತದೆ. ಕೊಡಗಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲೂ ಮಳೆ ಇರುವುದ ರಿಂದ ಹೆಚ್ಚಾಗಿ ಮಣ್ಣಿನ ಆಮ್ಲೀಯತೆಯ ಮಟ್ಟ(ಪಿಹೆಚ್ ವ್ಯಾಲ್ಯು) ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಮಣ್ಣಿನ ಪರೀಕ್ಷೆಯ ಮೂಲಕ, ಒಂದು ತೋಟಕ್ಕೆ ಎಷ್ಟು ರಸ ಗೊಬ್ಬರ ಹಾಕಬೇಕೆನ್ನುವುದನ್ನು ಖಚಿತವಾಗಿ ನಿರ್ಧರಿಸಿ, ಕೇಂದ್ರ ನೀಡುವ ಸಲಹೆಯಂತೆ ರಸಗೊಬ್ಬರ ನೀಡುವುದು ಅವಶ್ಯವೆಂದರು.

ಮಣ್ಣು ವಿಜ್ಞಾನಿ ಪ್ರಫುಲ್ಲ ಮಾತನಾಡಿ, ಕೇಂದ್ರವು ಬೆಳೆಗಾರರು ನೀಡುವ ಮಣ್ಣನ್ನು(ಸ್ಯಾಂಪಲ್)ನಿಗದಿತ ದರದೊಂದಿಗೆ ಪರಿಶೀಲಿಸಿ, ಆಯಾ ತೋಟಕ್ಕೆ ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುತ್ತಿದೆ.
ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಎಸ್.ಎ. ಮುರಳೀಧರ್, ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿದರು. ಸುಂಟಿಕೊಪ್ಪ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್ ಸ್ವಾಗತಿಸಿದರು.

ಕಾಫಿ ಹೊಸ ತಳಿ ಸಂಶೋಧನೆ

ಕಾಫಿ ಗಿಡಗಳನ್ನು ಬಾಧಿಸುವ ಬಿಳಿಕಾಂಡ ಕೊರಕ ಕೀಟ ನಿಯಂತ್ರಿಸುವ ಹೊಸ ಕಾಫಿ ತಳಿಯ ಸಂಶೋಧನೆಯನ್ನು ಕೇಂದ್ರ ನಡೆಸುತ್ತಿದೆ. ಜಿಲ್ಲೆಯ ವಿವಿಧ ೩೦ ಕಾಫಿ ತೋಟಗಳಲ್ಲಿನ ಅಧಿಕ ಇಳುವರಿ ನೀಡುವ ೨೦೫ ಗಿಡಗಳ ಪರಿಶೀಲನಾ ಕಾರ್ಯ ನಡೆಸುತ್ತಿರುವುದಾಗಿ ಸಸ್ಯ ತಳಿ ಶಾಸ್ತ್ರದ ವಿಜ್ಞಾನಿ ಡಾ. ಮಂಜುನಾಥ್ ಮಾಹಿತಿ ನೀಡಿದರು.

ಕೇಂದ್ರದಿಂದ ಆಸಕ್ತ ಬೆಳೆೆಗಾರಿಗೆ ಪ್ರಸ್ತುತ ಅರೇಬಿಕಾ ಚಂದ್ರಗಿರಿ ತಳಿ ಮತ್ತು ರೋಬಸ್ಟಾದಲ್ಲಿ ಕಾಂಜೆನ್ಸಿ ರೋಬಸ್ಟಾ ತಳಿಯ ಬೀಜಗಳನ್ನು ಪ್ರತಿ ಕೆ.ಜಿ.ಗೆ ೪೦೦ ರೂ.ಗಳಂತೆ ಒದಗಿಸುತ್ತಿದೆಯೆಂದು ಹೇಳಿದರು.

ಕಾಫಿ ತೋಟಗಳಲ್ಲಿ ಅಧಿಕ ಫಸಲು ನೀಡುವ ಗಿಡಗಳ ಕಂಬ ಚಿಗುರುಗಳಿಂದ ಗಿಡಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತಿದೆ. ಕಂಬ ಚಿಗುರಿನಿಂದ ಉತ್ಪಾದಿಸುವ ಗಿಡ, ಮೂಲ ಗಿಡದಂತೆಯೇ ಅಧಿಕ ಇಳುವರಿ ನೀಡುವ ಗಿಡವಾಗಿರುತ್ತದೆ. ಕಂಬ ಚಿಗುರಿನಿಂದ ಗಿಡಗಳನ್ನು ಮಾಡುವ ವಿಧಾನವನ್ನು ಆಸಕ್ತ ಬೆಳೆಗಾರರಿಗೆ ತಿಳಿಸಿಕೊಡಲು ಕೇಂದ್ರ ಸದಾ ಸಿದ್ಧವಿದೆಯೆಂದು ಸಷ್ಟ ಪಡಿಸಿದರು.

**
ಕೇಂದ್ರದಲ್ಲಿ ಅಗ್ರಾನಮಿ, ಪೆಥಾಲಜಿ , ಫಿಸಿಯಾಲಜಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ಹುದ್ದೆಗಳು ಖಾಲಿ ಇದೆ. ಪ್ರಸ್ತುತ ಐವರು ವಿಜ್ಞಾನಿಗಳು ಸೇರಿದಂತೆ ೨೦ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ೧೨೦.೮೬ ಹೆಕ್ಟೇರ್ ಜಾಗ ಹೊಂದಿದೆ. ೧೦೮.೩೬ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ತೋಟದಲ್ಲಿ ೬೯ ಜನ ಕೆಲಸ ಮಾಡುತ್ತಿದ್ದಾರೆ. ಚಂದ್ರಪ್ಪ, ಉಪನಿರ್ದೇಶಕರು, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net