

ಹುಬ್ಬಳ್ಳಿ : ನಗರದ ಡಿ.ವಿ.ಇ. ಅಕಾಡೆಮಿಯ ಚೇತನ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಸಕ್ತ ಸಾಲಿನ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮ ಶನಿವಾರ ಜರುಗಿತು.
ಅತಿಥಿಯಾಗಿದ್ದ ಡಿವಿಇ ಅಕಾಡೆಮಿ ಕಾರ್ಯದರ್ಶಿ ಪ್ರೊ. ಎಂ.ಎಚ್. ದ್ಯಾವಪ್ಪನವರ ಅವರು ಹೊಸದಾಗಿ ಆಯ್ಕೆಯಾದ ಶಾಲೆಯ ಸಂಸದರಿಗೆ ಬ್ಯಾಡ್ಜ್ಗಳನ್ನು ವಿತರಿಸಿದರು.
ಪ್ರಾಚಾರ್ಯ ಎಂ.ಎಂ. ಕರೇಗೌಡರ ಹೊಸದಾಗಿ ಆಯ್ಕೆಯಾದ ಶಾಲಾ ಸಂಸದರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಸಂಸತ್ತಿನ ದಾಮೋದರ ಬಳಿಗಾ ಹಾಗೂ ಉಪಾಧ್ಯಕ್ಷೆ ಪೂರ್ವಿ ಕರಿಕಟ್ಟಿ ಮಾತನಾಡಿದರು.
ತ್ರಿಷಾ ವಾಲಿ ಸ್ವಾಗತಿಸಿದರು. ಶಾಹಿನ ಕಾಟೆವಾಡಿ ಪರಿಚಯಿಸಿದರು. ಜುಡಿತ ದೇವದರ ನಿರೂಪಿಸಿದರು. ಆಯುಷ ಪಾರ್ವತಿಕರ ವಂದಿಸಿದರು.