ಜಾಂಬವತಿ ಕಲ್ಯಾಣ ಯಕ್ಷಗಾನ

yakshagana
ಹಿಮ್ಮೇಳ ಕಲಾವಿದರಾಗಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ ಮಕ್ಕಳಿಗೆ ಸಾಥ್ ನೀಡಿದರು.
Published on

ಮಂಗಳೂರಿನ ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ಸೇವಾ ಭಾರತಿ ವತಿಯಿಂದ ನಡೆಸಲ್ಪಡುವ ಚೇತನಾ ಬಾಲವಿಕಾಸ ಕೇಂದ್ರ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ವಾರ್ಷಿಕೋತ್ಸವ ಪ್ರಯುಕ್ತ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮುಖ್ಯ ಶಿಕ್ಷಕಿ ಸುಪ್ರೀತಾ ಶುಭ ಹಾರೈಸಿದರು. ನಿರ್ದೇಶಕರಾಗಿ ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್., ಚಂಪಾ ನರಸಿಂಹರಾಜು ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದರು. ಯೂಶಾನ್ ಎಂ.ಪೂಜಾರಿ ವೇಷಭೂಷಣದಲ್ಲಿ ಸಹಕರಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ ಮಕ್ಕಳಿಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net