

ಮಂಗಳೂರು : ಸೇವಾಭಾರತಿ ಮಂಗಳೂರು ಇದರ ಸೇವಾ ಪ್ರಕಲ್ಪವಾದ ಅನಂತಸೌಖ್ಯ ಹಾಗೂ ಕೆನರಾ ಆರ್ಥೋಪೆಡಿಕ್ ಸೊಸೈಟಿ ವತಿಯಿಂದ ಉಚಿತ ಮೂಳೆ ತಪಾಸಣಾ ಶಿಬಿರ ನಗರದ ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಠಾರದಲ್ಲಿ ನಡೆಯಿತು.
ಶಿಬಿರ ಉದ್ಘಾಟಿಸಿದ ಕೆಎಂಸಿ ಆಸ್ಪತ್ರೆಯ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಕೆ.ಆರ್.ಕಾಮತ್ ಅವರು ಮೂಳೆಯ ಸವೆತ ಹಾಗೂ ಟೊಳ್ಳುತನದ ಬಗ್ಗೆ ವಿವರಿಸಿದರು. ಯುನಿಟಿ ಆಸ್ಪತ್ತೆಯ ಡಾ.ಲಕ್ಷಣ್ ಸುವರ್ಣ ಮುಖ್ಯ ಅತಿಥಿಯಾಗಿದ್ದರು.
ಸೇವಾ ಭಾರತಿಯ ಗೌರವ ಕಾರ್ಯದರ್ಶಿ ಎಚ್.ನಾಗರಾಜ್ ಭಟ್ ಸಂಸ್ಥೆಯ ವಿವಿಧ ಸಮಾಜಮುಖಿ ಚಟುವಟಿಕೆಗಳ ವಿವರ ನೀಡಿದರು. ಅನಂತಸೌಖ್ಯ ಸಂಚಾಲಕ ಉಮೇಶ್ ಶೆಣೈ, ಸೇವಾಭಾರತಿಯ ವಿಶ್ವಸ್ಥ ವಿನೋದ್ ಶೆಣೈ , ಕೆ.ಎಂ.ಸಿ,ಆಸ್ಪತ್ರೆಯ ಡಾ.ಮೀರಾ,ಡಾ.ಮಣಿಕಂಠ ಉಪಸ್ಥಿತರಿದ್ದರು. ಉಮೇಶ್ ಶೆಣೈ ವಂದಿಸಿದರು. 148 ಮಂದಿ ಶಿಬಿರದ ಪ್ರಯೋಜನ ಪಡೆದರು.