ಚೇತನ್ ಪಬ್ಲಿಕ್ ಶಾಲಾ ಪ್ರಾರಂಭೋತ್ಸವ

New Chetan new
Published on

ಹುಬ್ಬಳ್ಳಿ : ಇಲ್ಲಿನ ದ್ಯಾವಪ್ಪನವರ ವಳಸಂಗ ಶಿಕ್ಷಣ ಸಂಸ್ಥೆಯ ಚೇತನ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಪ್ರವೇಶ ಪಡೆದ ಶಾಲಾ ವಿದ್ಯಾರ್ಥಿಗಳ ಮತ್ತು ಪಾಲಕರ ಸಭೆ ಕರೆಯುವ ಮೂಲಕ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಬುಧವಾರ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಪ್ರೊ. ಜಿ.ವಿ.ವಳಸಂಗ ಮಾತನಾಡಿ, ಮುಂಬರುವ ಹೊಸ ಐ.ಸಿ.ಎಸ್.ಇ. ಶಾಲೆಯಲ್ಲಿನ ಸೌಕರ್ಯಗಳ ಬಗ್ಗೆ ತಿಳಿಸಿದರು.

ಈ ಶಾಲೆಯ ಶಿಕ್ಷಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಾಯ, ಸಹಕಾರವನ್ನು ನೀಡುವರೆಂದು ಪಾಲಕರಿಗೆ ಭರವಸೆ ಮೂಡಿಸಿದರು.

ಪ್ರಾಚಾರ್ಯ ಎಂ.ಎಂ. ಕರೇಗೌಡರ ಮಾತನಾಡಿ, ಶಾಲೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟರೆ ಮಾತ್ರ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ನಮ್ಮ ಶಾಲೆಯಲ್ಲಿನ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಸಾಧನೆಯ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಹಾಗೂ ಪಾಲಕರ ಸಹಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

2023ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ದೈವಿಕ ಮಾನಕಾಮೆ, ದ್ವಿತೀಯ ಸ್ಥಾನ ಪಡೆದ ವಜ್ರಾ ಗಾಯಕವಾಡ ಹಾಗೂ ತೃತೀಯ ಸ್ಥಾನ ಪಡೆದ ಅದಿತಿ ಹೆಗಡೆ, ಸೃಜನ ಜೋಶಿ, ಟಿ ಎಂ ಅನಸ ಅವರನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ಜಿ.ವಿ. ವಳಸಂಗ ಮತ್ತು ಶಾಲಾ ಪ್ರಾಚಾರ್ಯ ಎಂ.ಎಂ.ಕರೇಗೌಡರ ಅವರು ಸನ್ಮಾನಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಎಂ.ಎಚ್. ದ್ಯಾವಪ್ಪನವರ ಹಾಗೂ ಇತರರು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಸ್ಯಾಂಡಿ ಅಂಗಡಿ ಸ್ವಾಗತಿಸಿದರು. ರಶ್ಮಿ ಪಾಟೀಲ ನಿರೂಪಿಸಿದರು. ಗಾಯತ್ರಿ ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net