

ಹುಬ್ಬಳ್ಳಿ: ವಿದ್ಯಾರ್ಥಿಗಳು ಮನಸ್ಸು ನಿಯಂತ್ರಣದಲ್ಲಿರಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಮನೋನಿಗ್ರಹ ಬಹಳ ಮುಖ್ಯ ಎಂದು ಇಸ್ಕಾನ್ ವ್ಯಕ್ತಿತ್ವ ತರಬೇತುದಾರರಾದ ಗರುಡದ್ವಜ ದಾಸ ಅಭಿಪ್ರಾಯಪಟ್ಟರು.
ಇಲ್ಲಿಯ ಉಣಕಲ್ಲನಲ್ಲಿರುವ ಚೇತನ ಬಿಜಿನೆಸ್ ಸ್ಕೂಲ್ ನಲ್ಲಿ 2025- 27ನೇ ಸಾಲಿನ ವಿದ್ಯಾರ್ಥಿಗಳ "ಆರಂಭ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡ ನಿವಾರಿಸಿಕೊಂಡು ಖಿನ್ನತೆಯಿಂದ ಹೊರಬರಬೇಕು. ಜ್ಞಾನ ಮತ್ತು ವಿವೇಕವನ್ನು ಹೆಚ್ಚಿಸಿಕೊಳ್ಳಲು ಧ್ಯಾನ ಮತ್ತು ಮಂತ್ರ ಪಠಣವು ಹೆಚ್ಚು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಇವುಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಉತ್ತಮವಾದ ಒತ್ತಡ ರಹಿತ ಜೀವನವನ್ನು ಹೊಂದಬಹುದು ಎಂದು ತಿಳಿಸಿದರು.
ನಿತ್ಯಾ, ಧನ್ಯಾ ಜೂನಿಯರ್ ಅಸಿಸ್ಟೆಂಟ್- ಟ್ಯಾಕ್ಸ್ ಹುದ್ದೆಗೆ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ, ಸಂಸ್ಥೆಯಲ್ಲಿ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪ್ರೊ. ಶ್ರೇಯಸ್ ಮುರ್ಡೇಶ್ವರ ಪರಿಚಯಿಸಿದರು. ಸ್ನೇಹಾ ಸ್ವಾಗತಗೀತೆ ಹಾಡಿದರು. ಡಾ. ಭಾರ್ಗವ ರೇವಣಕರ ಸ್ವಾಗತಿಸಿದರು. ಪ್ರೊ. ಬರಮಪ್ಪ ಸಂಸ್ಥೆಯ ಬಗ್ಗೆ ವಿಡಿಯೋ ಪ್ರಸ್ತುತಪಡಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಅನಿರುದ್ಧ ಅಂಕೋಲೆಕರ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಾಣಿಕ ವಂದಿಸಿದರು.