ಪತ್ರಕರ್ತರು, ಮಕ್ಕಳಿಗಾಗಿ ಚದುರಂಗ ತರಬೇತಿ ಕಾರ್ಯಾಗಾರ

raichur
raichur
Published on

ರಾಯಚೂರು ಮಕ್ಕಳ ಬೌದ್ಧಿಕ ಶಕ್ತಿ ವೃದ್ದಿಗೆ ಚದುರಂಗ ಕಲಿಯುವುದು ಅತ್ಯಂತ ಅಗತ್ಯವಾಗಿದೆಂದು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರವಿಕುಮಾರ ಗಣೇಕಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರೋಟರಿ ಕ್ಲಬ್ ವತಿಯಿಂದ ಪತ್ರಕರ್ತರು ಹಾಗೂ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚದುರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸಮಾಜದಲ್ಲಿ ಬುದ್ದಿವಂತರೆಂಬ ಮಾತಿದ್ದು, ಅವರ ಮಕ್ಕಳಿಗೆ ಬುದ್ದಿವಂತಿಕೆಗೆ ಚೆಸ್ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವೇದಾಂತ ಕಾಲೇಜಿನ ಆಡಳಿತಾಧಿಕಾರಿ ರಾಕೇಶ ರಾಜಲಬಂಡಿ ಮಾತನಾಡಿ, ಚೆಸ್ ಎನ್ನುವುದು ಅತ್ಯಂತ ಬುದ್ದಿವಂತರ ಆಟ ಯಾರು ಇದನ್ನು ಕಲಿಯುತ್ತಾರೊ ಅವರ ಮೆದಳು ಯಾವಾಗಲೂ ಚಟುವಟಿಕೆಯಿಂದ ಇರುತ್ತದೆ ಎಂದರು.

ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇಂತಹ ಆಟಗಳನ್ನು ಕಲಿಯಬೇಕು ಒಂದು ಉತ್ತಮ ಕಾರ್ಯಾಗಾರ ಆಯೋಜಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ್ ಜಾಗಟಗಲ್ ಮಾತನಾಡಿ,ಇಂದು ಮಕ್ಕಳು ಮೊಬೈಲ್ ಅತಿಯಾಗಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿಯೂ ಇರುವ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಚೆಸ್ ತರಬೇತಿ ಆಯೋಜಿಸಿದ್ದೇವೆ. ಸಮಾಜದಲ್ಲಿ ಪತ್ರಕರ್ತರ ವರದಿಗಾರಿಕೆ ಯಷ್ಟೆ ಜವಾಬ್ದಾರಿ ಸಮಾಜಮುಖಿ ಯಾಗಿರಬೇಕೆಂಬ ಆಲೋಚನೆಯಿಂದ ನಗರದ ಎಲ್ಲ ಪತ್ರಕರ್ತರ ಮಕ್ಕಳಿಗೆ ಈ ತರಬೇತಿ ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕೇಶವರಾವ್, ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಮೃತ್ಯುಂಜಯ ಮಾಚನೂರು, ಪತ್ರಕರ್ತ ಬಿ.ವೆಂಕಟಸಿಂಗ್, ತರಬೇತುದಾರರಾದ ಹನುಮಂತ ಯಾದವ್ ಶರತ್ ಕುಮಾರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ,ಪತ್ರಕರ್ತರಾದ ಕೆ.ಸತ್ಯನಾರಾಯಣ, ಚನ್ನಬಸವಣ್ಣ, ರಂಗನಾಥ್ ಚಂದ್ರಕಾಂತ ಮಸಾನಿ, ಚನ್ನಬಸವ ಬಾಗಲವಾಡ,ಶ್ರೀಕಾಂತ ಸಾವೂರು, ವಿಶ್ವನಾಥ ಬಿ.ಸ್ವಾಮಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net