ಚದುರಂಗ ಪಂದ್ಯಾವಳಿ ಅ. 8ಕ್ಕೆ

download
Published on

ಧಾರವಾಡ: ಹುಬ್ಬಳ್ಳಿಯ ಶ್ರೀ ಸದ್ಗುರು ಚೆರ್ಸ್ಮಾ ಮತ್ತು ಮ್ಯೂಸಿಕ ಅಕಾಡೆಮಿ ವತಿಯಿಂದ ಮಕ್ಕಳ ರ‍್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶ್ರೀ ಜಗದ್ಗುರು ಶೃಂಗೇರಿ ಶಾರದಾ ಪೀಠದ ವಿದ್ಯಾಭಾರತಿ ಸಭಾಭವನದಲ್ಲಿ ಅ. ೮ರಂದು ಆಯೋಜಿಸಲಾಗಿದೆ. ಮುಕ್ತ ವಿಭಾಗದಲ್ಲಿ ಎಲ್ಲ ವಯೋಮಾನದವರು ಭಾಗವಹಿಸಬಹುದು. ವಿಜೇತರಿಗೆ ನಗದು ಬಹುಮಾನ 20,000 ರೂ. ಹಾಗೂ 100ಕ್ಕೂ ಹೆಚ್ಚು ಬಹುಮಾನ ನೀಡಲಾಗುವುದು. ಮಕ್ಕಳ ವಿಭಾಗದಲ್ಲಿ 10, 13 ಮತ್ತು 16 ವರ್ಷದೊಳಗಿನ ಪ್ರತ್ಯೇಕ ಸ್ಪರ್ಧೆ ಇರಲಿದ್ದು, ಬಹುಮÁನಗಳಿವೆ. ೭ ವರ್ಷದೊಳಗಿನ ವಿಭಾಗದಲ್ಲಿ ಭಾಗವಹಿಸುವ ಮಕ್ಕಳಿಗೆ ಆಕರ್ಷಕ ಪಾರಿತೋಷಕ ನೀಡಲಾಗುವುದು. ಆಸಕ್ತರು https://chessfee.com/tmt_details.php?id=751 ಲಿಂಕ್ ಬಳಸಿ ಅ. 5ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net