

ಚಿಕ್ಕಮಗಳೂರು: ಜಿಲ್ಲಾ ಚೆಸ್ ಅಸೋಸಿಯೇಷನ್‌ನಿಂದ ಜು. ೨೬, ೨೭, ೨೮ರಂದು ಮೂರು ದಿನಗಳ ಕಾಲ ಜ್ಯೋತಿನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟçಮಟ್ಟದ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ನಯನ್ ತಳವಾರ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೧೩ ವರ್ಷ ವಯೋಮಿತಿಯೊಳಗಿನ ಫಿಡೆ ರೇಟಿಂಗ್ ಪಂದ್ಯಾವಳಿಯು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಏರ್ ಡೆಕ್ಕನ್ ವಿಮಾನ ಖ್ಯಾತಿಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರು ಪಂದ್ಯಾವಳಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ರಾಷ್ಟçಮಟ್ಟದ ಆಯ್ಕೆಗಾಗಿ ಕರ್ನಾಟಕದ ಓಪನ್ ಅಂಡರ್ ೧೩ ಹಾಗೂ ಬಾಲಕಿಯರಿಗಾಗಿ ರಾಜ್ಯ ಗರ್ಲ್ಸ್ ಅಂಡರ್ ೧೩ ಫೀಡೆ ರ‍್ಯಾಂಕಿAಗ್ ಚೆಸ್ ಪಂದ್ಯಾವಳಿ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೩೫೦ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪಂದ್ಯಾವಳಿಯು ಕ್ಲಾಸಿಕ್ ಮಾದರಿಯಲ್ಲಿ ನಡೆಯಲಿದ್ದು, ಇಲ್ಲಿ ಆಯ್ಕೆಯಾದವರು ಮಹಾರಾಷ್ಟçದಲ್ಲಿ ನಡೆಯುವ ರಾಷ್ಟçಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದಾರೆ. ದಿನಕ್ಕೆ ಮೂರರಂತೆ ಮೂರು ದಿನಗಳ ಕಾಲ ೯ ಪಂದ್ಯಗಳು ನಡೆಯಲಿದ್ದು, ಅಂತರಾಷ್ಟಿçÃಯ ರೆಫರಿಗಳ ಸಮ್ಮುಖದಲ್ಲಿ ವಿಜೇತರ ಆಯ್ಕೆ ನಡೆಲಿದೆ ಎಂದರು.
ಅಸೋಸಿಯೇಷನ್ ಉಪಾಧ್ಯಕ್ಷ ರಘು ಜನ್ನಾಪುರ ಮಾತನಾಡಿ, ಈ ಪಂದ್ಯಾವಳಿಯಲ್ಲಿ ೭೨ ಸಾವಿರ ನಗದು ಸೇರಿದಂತೆ ೪೦ ಟ್ರೋಫಿಗಳನ್ನು ನೀಡಲಾಗುವುದು. ಭಾಗವಹಿಸುವ ಆಟಗಾರರಿಗೆ ಫಿಡೆ ರೇಟಿಂಗ್ ಕೂಡ ದೊರೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಗ್ರಾಂಡ್ ಮಾಸ್ಟರ್ ಹಾಗೂ ಇಂಟರ್ ನ್ಯಾಷನಲ್ ಮಾಸ್ಟರ್ ಆಕಾಂಕ್ಷಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಚೆಸ್ ಪಂದ್ಯಾವಳಿಯಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ಎಚ್.ಡಿ ತಮ್ಮಯ್ಯ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಡಾ. ಧನಂಜಯ ಸರ್ಜಿ, ಬಿ.ಬಿ.ನಿಂಗಯ್ಯ, ಡಾ.ಅಂಶುಮAತ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಎಸ್‌ಪಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಕೀರ್ತನ, ವರಸಿದ್ಧಿ ವೇಣುಗೋಪಾಲ್, ಜಿ.ಎಂ.ರಾಜಶೇಖರ್, ರಂಜನ್ ಅಜಿತ್‌ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಚೆಸ್ ಅಸೋಸಿಯೇಷನ್ ಸಹಕಾರ್ಯದರ್ಶಿ ಗಿರೀಶ್ ಮಣ್ಣಿಕೆರೆ, ಪ್ರಮುಖರಾದ ರಘು, ಪ್ರಸನ್ನಕುಮಾರ್, ಶಿವಕಾಶಿ ಮತ್ತಿತರರಿದ್ದರು.