

ಉಳ್ಳಾಲ: ತಲಪಾಡಿ ಶಾರದಾ ಕಾಲೇಜಿನಲ್ಲಿ ನಡೆದ 28ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳು ಗುಲಾಬಿ ಶಿವರಾಮ ನೊಂಡ ರೋಲಿಂಗ್ ಟ್ರೋಫಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಮಹಿಳಾ ವಿನ್ನರ್ಸ್ ಪ್ರಶಸ್ತಿ, ಕುಂದಾಪುರದ ಡಾ.ಬಿ.ಬಿ.ಹೆಗ್ಗಡೆ ಕಾಲೇಜು ಮಹಿಳಾ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ. ಪ್ರಥಮ ರನ್ನರ್ ಅಪ್ ಪ್ರಶಸ್ತಿ ಮಡಂತ್ಯಾರು ಸೇಕ್ರೆಡ್ ಕಾಲೇಜು ಪಡೆದುಕೊಂಡರೆ, ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಮಂಗಳೂರಿನ ಎಸ್‌ಡಿಎಂ ಬಿಜಿನೆಸ್ ವ್ಯಾನೇಜ್‌ಮೆಂಟ್ ಕಾಲೇಜು ಪಡೆದುಕೊಂಡಿದೆ.
ಪುರುಷರ ವಿನ್ನರ್ಸ್ ಪ್ರಶಸ್ತಿ ಉಜಿರೆ ಎಸ್.ಡಿ.ಎಂ. ಕಾಲೇಜು ಪಡೆದುಕೊಂಡರೆ, ರನ್ನರ್ ಅಪ್ ಪ್ರಶಸ್ತಿ ಕುಂದಾಪುರದ ಡಾ.ಬಿ.ಬಿ.ಹೆಗ್ಗಡೆ ಕಾಲೇಜು ಮತ್ತು ಮಂಗಳೂರಿನ ಡಾ.ದಯಾನಂದ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಜಿಎಫ್‌ಜಿಸಿ ಸುಳ್ಯ ಪಡೆದುಕೊಂಡಿದೆ.
ಸವಾರೋಪದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಫೆಲಿಕ್ಸ್ ಚೆಸ್ ಅಕಾಡೆಮಿ ದೈಹಿಕಶಿಕ್ಷಣ ಶಿಕ್ಷಕ ಪ್ರಸನ್ನ ರಾಜ್, ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಪ್ರಾಂಶುಪಾಲೆ ಡಾ.ಮೀನಾ ಜೆ.ಪಣಿಕ್ಕರ್, ದೈಹಿಕ ಶಿಕ್ಷಕಿ ನೀತು ಕೆ.ಎಸ್. ಉಪಸ್ಥಿತರಿದ್ದರು.