Chess Park - ಉತ್ತರ ಕನ್ನಡದ 4 ಕಡೆ ಚೆಸ್‌ ಪಾರ್ಕ್‌

Chess Park
Published on

ಕಾರವಾರ Chess Park:ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯಲ್ಲಿ ಬಂದಾಗಿ, ಪಾಳು ಬಿದ್ದಿದ್ದ ಮರಾಠಿ ಶಾಲೆಯ ಆವರಣದಲ್ಲಿ ರಾಜ್ಯದ ಮೊದಲ ಸಾರ್ವಜನಿಕ ಚೆಸ್ ಪಾರ್ಕ್ ಹಾಗೂ ಬಸ್ ತಂಗುದಾಣ  ಸೋಮವಾರ ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಕಾರವಾರ ತಾಲೂಕು ಪಂಚಾಯಿತಿ ಹಾಗೂ ಚಿತ್ತಾಕುಲಾ ಗ್ರಾಮ ಪಂಚಾಯಿತಿಯಿಂದ ಜಿಪಂ ಸಿಇಒ ಈಶ್ವರ ಕಾಂದೂ ಅವರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ. ಶಾಸಕ ಸತೀಶ ಸೈಲ್ ಅವರು ಜಿಪಂ ಸಿಇಒ ಈಶ್ವರ ಕಾಂದೂ ಅವರ ಜತೆ ಚೆಸ್ ಆಡುವ ಮೂಲಕ ಸೋಮವಾರ ಚೆಸ್‌ಪಾರ್ಕ್ಗೆ ಚಾಲನೆ ನೀಡಿದರು. ಇಲ್ಲಿ ಬಸ್ ನಿಲ್ದಾಣದ ಪಕ್ಕ ಟೇಬಲ್‌ಗಳನ್ನು ಇರಿಸಲಾಗಿದ್ದು, ಪ್ರತಿ ಟೇಬಲ್‌ಗೆ ಒಂದೊಂದು ಚೆಸ್ ಬೋರ್ಡ್ ನೀಡಲಾಗುತ್ತದೆ. ಬಿಡುವಿನ ವೇಳೆಯಲ್ಲಿ ಸಾರ್ವಜನಿಕರು ಚೆಸ್ ಆಡಬಹುದು. Chess Park

ಸ್ಥಳೀಯ ಗ್ರಾಮ ಪಂಚಾಯಿತಿ ಈ ಪಾರ್ಕ್ ನಿರ್ವಹಿಸಲಿದ್ದು, ಸ್ಥಳೀಯ ಪರಿಣಿತರಿದ್ದಲ್ಲಿ ಆಸಕ್ತರಿಗೆ ಚೆಸ್ ತರಬೇತಿ ನೀಡುವ ಕಾರ್ಯವನ್ನೂ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಸತೀಶ ಸೈಲ್ ಮಾತನಾಡಿ, ಬಾಲ್ಯದಿಂದಲೇ ಚೆಸ್ ಆಡುವುದರಿಂದ ಮಕ್ಕಳಲ್ಲಿ ಕಲಿಕೆ, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದರು.

ಇದೇ ರೀತಿ ಕುಮಟಾ ತಾಲೂಕಿನ ಹೆಗಡೆ, ದಾಂಡೇಲಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿಗಳಲ್ಲಿ ಜಿಪಂನಿಂದ Chess Park ಚೆಸ್ ಪಾರ್ಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಚೆಸ್ ಕೇವಲ ಆಟವಲ್ಲ ಮೈಂಡ್ ಗೇಮ್ ಆಟವಾಗಿದ್ದು, ಯಾವ ಹಂತದಲ್ಲಿ ಯಾವ ಕಾಯಿ ಮುನ್ನೆಡಸಬೇಕು, ಯಾವ ರೀತಿ ಆಡಬೇಕು ಎನ್ನುವುದರ ಯೋಜನೆ ರೂಪಿಸಿ ಆಡುವ ಆಟವಾಗಿದೆ.

ಕಾರ್ಯಕ್ರಮದಲ್ಲಿ ಎಸಿ ಕನಿಷ್ಕ ಜಿಪಂ ನಿವೃತ್ತ ಮುಖ್ಯ ಯೋಜನಾಕಾರಿ ವಿನೋದ ಅಣ್ವೇಕರ, ತಾಪಂ ಆಡಳಿತಾಕಾರಿ ಸೋಮಶೇಖರ ಮೆಸ್ತಾ, ಕಾರ್ಯನಿರ್ವಹಣಾಽಕಾರಿ ವೀರನಗೌಡ, ಚಿತ್ತಾಕುಲ ಗ್ರಾಪಂ ಅಧ್ಯಕ್ಷ ನಿತೀನ್ ಬಾಂದೇಕರ್, ಉಪಾಧ್ಯಕ್ಷ ಸೂರಜ್ ದೇಸಾಯಿ ಇದ್ದರು.

ಈ ಆಟ ಜೀವನಕ್ಕೂ ಅನ್ವಯವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಈ ಆಟದಲ್ಲಿ ತಿಳಿಯುತ್ತದೆ. ಈ ಆಟದಿಂದ ಬುದ್ದಿಮತ್ತೆ ಹೆಚ್ಚಾಗಿ ಜವಾಬ್ದಾರಿಯುತ ಮನುಷ್ಯನಾಗಿ ಮಾಡುತ್ತದೆ ಎಂದರು.

ಜಿಲ್ಲೆಯಲ್ಲಿ ಉತ್ತಮ ಪ್ರತಿಭೆಗಳಿವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅವಶ್ಯಕತೆಯಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಸಲಾಗುತ್ತಿದೆ. ಸದ್ಯ ನಾಲ್ಕು ಕಡೆ ಪ್ರಾಯೋಗಿಕವಾಗಿ ಚೆಸ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಕಡೆ ಇದನ್ನು ಮಾಡಲು ಯೋಜಿಸಲಾಗಿದೆ. ಈಶ್ವರ ಕಾಂದೂ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net