ಇಡೀ ಪ್ರಪಂಚಕ್ಕೆ ಪಸರಿಸಿದೆ ಚದುರಂಗ

10 SIRGUPPA 03
ಸಿರಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
Published on

ಸಿರಗುಪ್ಪ : ಬುದ್ಧಿವಂತಿಕೆ ಪ್ರದರ್ಶಿಸುವ ಆಟವೇ ಚದುರಂಗವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಪ್ರಜ್ಞಾನಂದ ಚೆಸ್ ಶಾಲೆ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚೆಸ್ ಪಂದ್ಯಾವಳಿಯಲ್ಲಿ ಮಾತನಾಡಿದರು.

ಸಾಧನ ಕೋಚಿಂಗ್ ಸೆಂಟರ್ ವ್ಯವಸ್ಥಾಪಕ ಲಿಂಗನಗೌಡ ಮಾತನಾಡಿ, ಈ ಪಂದ್ಯಾವಳಿ ಭಾರತದಲ್ಲಿ ಉದಯವಾಗಿ ಇಡೀ ಪ್ರಪಂಚದಲ್ಲಿ ಪಸರಿಸಿದೆ. ವಿಶ್ವ ಚೆಸ್ ಚಾಂಪಿಯನ್ ಗುಕೇಶ್ 18ನೇ ವಯಸ್ಸಿಗೆ 18ನೇ ಯುವ ಚೆಸ್ ಚಾಂಪಿಯನ್ ಆಗಿದ್ದಾರೆ. ಕೊನೇರು ಹಂಪಿ ಇವರು ವಿಶ್ವ ಚೆಸ್ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗಾತಿಯಾಗಿದೆ.

ರಾಷ್ಟ್ರೀಯ ಹಿರಿಯ ಚೆಸ್ ತೀರ್ಪುಗಾರ ಹಾಗೂ ಮುಖ್ಯ ಸಂಘಟಕಾರ ಜಗದೀಶ ಕೋರಿ ಮಾತನಾಡಿ, ಕಲಬುರಗಿ ಸಿಂಧನೂರು, ಕಂಪ್ಲಿ, ಬಳ್ಳಾರಿ, ರಾಯಚೂರು, ನೆರೆ ಸೀಮಾಂಧ್ರ ಪ್ರದೇಶದ ಆದೋನಿ ಮತ್ತು ಗುಂತಕಲ್ ಪ್ರದೇಶದಿಂದ ಒಟ್ಟು 283 ಮಕ್ಕಳು ಭಾಗವಹಿಸಿದ್ದರು. ಬಳ್ಳಾರಿಯ ಭೂಗಲ್ ವೇದಾಂತ ರೆಡ್ಡಿ ಪ್ರಥಮ, ಭಾನುಪ್ರಸಾದ್ ಯಾದವ್ ದ್ವಿತೀಯ, ಗುರು ಬಾಂದ್ರ ತೃತೀಯ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ಇವರಿಗೆ ನಗದು ಮತ್ತು ಚಾಂಪಿಯನ್ ಟ್ರೋಫಿ ಹಾಗೂ ಪ್ರಮಾಣ ಪತ್ರ, ಮೇಡಲ್ ವಿತರಿಸಲಾಗಿದೆ ಎಂದರು.

ಕ.ಸ.ನೌ.ಸಂಘದ ಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ, ಅಂತಾರಾಷ್ಟ್ರೀಯ ಚೆಸ್ ತೀರ್ಪುಗಾರರಾದ ಪ್ರಮೋದ್ ರಾಜ್ಮೋರೆ, ರಾಷ್ಟ್ರೀಯ ಹಿರಿಯ ಚೆಸ್ ತೀರ್ಪುಗಾರ ಬಿ.ಪ್ರಕಾಶ, ವಕೀಲ ದೊಡ್ಡನಗೌಡ, ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಲಿಂಗನಗೌಡ, ಶಾಲೆಗಳ ರೈಸ್ ಮಿಲ್ ಮಾಲೀಕರಾದ ಚಂದ್ರಶೇಖರ, ಬೇವಿನಹಾಳ್ ಮಂಜುನಾಥ ಶೆಟ್ಟಿ, ಶಾಂತಿನಿಕೇತನ ಶಾಲೆಯ ಮುಖ್ಯ ಶಿಕ್ಷಕ ಧರ್ಮಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net