ಚದುರಂಗ ಆಟದಿಂದ ಚಾಣಾಕ್ಷತನ ವೃದ್ಧಿ

27Athni3A
Published on

ಅಥಣಿ: ಬುದ್ಧಿ ಹಾಗೂ ಚಾಣಾಕ್ಷತನಕ್ಕೆ ವೃದ್ಧಿಸಲು ಚದುರಂಗ ಆಟ ಸಹಕಾರಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರತದಿಂದ ಹೆಚ್ಚು ಜನರು ಚದುರಂಗದ ಮಾಸ್ಟರ್ ಆಗಿ ಹೊರಹೊಮ್ಮಲಿ ಎಂದು ಜೆ.ಎ.ಶಿಕ್ಷಣ ಸಂಸ್ಥೆಯ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಹೇಳಿದರು.

ಸ್ಥಳೀಯ ಕೆ.ಎ.ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಏಕವಲಯ ಪುರುಷ ಮತ್ತು ಮಹಿಳಾ ಚದುರಂಗ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಆರ್.ಎಂ.ದೇವರೆಡ್ಡಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎ.ಗುಡ್ಡಾಪುರ, ಎಸ್.ಎಸ್.ಕಟಗೇರಿ, ಜಿ.ಎಂ.ಕುಲಕರ್ಣಿ, ಆರ್.ಎ.ನಾಯಿಕ, ಎಂ.ಜಿ.ನಾಯಿಕ, ದೀಪಕ ಕರಡಿ, ಬಸವರಾಜ ಕಾಂಬಳೆ, ಬಾಳೇಸ ಬಮನಾಳೆ, ಜಿ.ಎ.ದಿಕ್ಷಿತ್, ಮನೋಜಕುಮಾರ ಆಕಾಶ, ಭಾರತಿ ಅಗಸರ, ಸೃಷ್ಟಿ ಬಕಾಲಿ, ಎಸ್.ಆರ್.ಕಟಗೇರಿ, ಆರ್.ಎಸ್.ನಾಗರೆಡ್ಡಿ, ಬಿ.ಎಸ್.ಇಟ್ನಾಳ, ಬಿ.ಬಿ.ಕಬಾಡಗಿ, ಭವಾನಿ ಪಾಟೀಲ, ದಾಕ್ಷಾಯಿಣಿ ತಾಂವಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net