

ಹುಬ್ಬಳ್ಳಿ: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಚದುರಂಗ (ಚೆಸ್) ಸ್ಪರ್ಧೆಯಲ್ಲಿ ನಗರದ ಎಸ್ ಬಿಐ ಸ್ಕೂಲ್ 10ನೇ ತರಗತಿ ವಿದ್ಯಾರ್ಥಿ ತನ್ಮಯ್ ಸಂಜೀವ ಪುತ್ಲೆಕರ್ ಧಾರವಾಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 26ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ.
ತನ್ಮಯ್ 17ವರ್ಷದ ಒಳಗಿನ ವಯೋಮಾನದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾನೆ ಎಂದು ತಿಳಿಸಲಾಗಿದೆ.