

ಕೊಪ್ಪ: ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿ ಶಮಿತಾ ಪಾಲಕರಿಗೆ ಶಾಸಕ ಟಿ.ಡಿ.ರಾಜೇಗೌಡ ನೀಡಿದ 5 ಲಕ್ಷ ರೂ.ಚೆಕ್‌ನ್ನು ನಿರಾಕರಿಸಿದ್ದಾರೆ.
ಶಾಸಕ ಟಿ.ಡಿ.ರಾಜೇಗೌಡ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಮೃತ ವಿದ್ಯಾರ್ಥಿನಿ ಪಾಲಕರಿಗೆ ಸಾಂತ್ವನ ಹೇಳಲು ಹಾಗೂ ಇಲಾಖೆಯಿಂದ ಚೆಕ್‌ವಿತರಿಸಲು ಮನೆಗೆ ತೆರಳಿದ್ದರು. ಆಗ ಮೃತರ ಪಾಲಕರು ಚೆಕ್ ಪಡೆಯಲು ನಿರಾಕರಿಸಿ ನಮಗೆ ಚೆಕ್ ನೀಡುವುದು ಬೇಡ, ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಇದು ಆತ್ಮಹತ್ಯೆಯಲ್ಲ, ಕೊಲೆ. ಈ ಸಂಬಂಧ ಇಲಾಖೆ ತನಿಖೆ ನಡೆಯಬೇಕು. ನಾವು ಆತ್ಮಹತ್ಯೆಯಾಗಿದೆ ಎಂದು ಒಪ್ಪಿಕೊಳ್ಳಲು ಸಿದ್ದವಿಲ್ಲ ಎಂದು ಶಾಸಕರ ಬಳಿ ಅಳಲು ತೋಡಿಕೊಂಡರು.
ಈ ಶಾಸಕ ರಾಜೇಗೌಡ ಪಾಲಕರಿಗೆ ಸಾಂತ್ವನ ಹೇಳಿ ನಿಮಗೆ ಇರುವ ಅನುಮಾನದ ಬಗ್ಗೆ ಪತ್ರದಲ್ಲಿ ಬರೆದುಕೊಡಿ, ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಮ್ಮ ದೂರಿನ ಮುಖವಾಗಿ ತನಿಖೆಯ ನಡೆಸಲಾಗುವುದು ಎಂದು ಭರವಸೆ ನೀಡಿದರು.