ಸುಹಾಸ್​ ಕುಟುಂಬಕ್ಕೆ ಚೆಕ್​ ಹಸ್ತಾಂತರ

Cheque handed over to Suhas' family
ಮಂಗಳೂರಿನಲ್ಲಿ ಹತ್ಯೆಯಾದ ಹಿಂದು ಕಾರ್ಯಕರ್ತ ಸುಹಾಸ್​ ಶೆಟ್ಟಿ ಕುಟುಂಬಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆಪ್ತ ಸಹಾಯಕರು ಚೆಕ್​ ಹಸ್ತಾಂತರಿಸಿದರು. ಪಿ.ಜಿ. ಕೆಂಗನಾಳ, ಉಮೇಶ ಕೋರೆ, ಯಲಗೊಂಡ ಬಾಗಾದಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮಂಗಳೂರಿನಲ್ಲಿ ಹತ್ಯೆಯಾದ ಹಿಂದು ಕಾರ್ಯಕರ್ತ ಸುಹಾಸ್​ ಶೆಟ್ಟಿ ಕುಟುಂಬಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೈಯಕ್ತಿಕವಾಗಿ ನೀಡಿದ 5 ಲ ರೂ. ಸಹಾಯ ಧನದ ಚೆಕ್​ನ್ನು ಮಂಗಳವಾರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಸುಹಾಸ್​ ಶೆಟ್ಟಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಶಾಸಕ ಯತ್ನಾಳ, ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 5 ಲ ರೂ. ಸಹಾಯ ಧನ ನೀಡುವುದಾಗಿ ೂಷಿಸಿದ್ದರು. ಅದರಂತೆ ಶಾಸಕರು ತಮ್ಮ ಆಪ್ತ ಸಹಾಯಕರ ಮೂಲಕ ಬಂಟ್ವಾಳ ತಾಲೂಕಿನ ಕಾರಿಂಜ ಗ್ರಾಮದಲ್ಲಿರುವ ಸುಹಾಸ್​ ತೋಟದ ಮನೆಯಲ್ಲಿರುವ ಸುಹಾಸ್​ ಪಾಲಕರಿಗೆ ಚೆಕ್​ ಹಸ್ತಾಂತರಿಸಿದರು.

ಶಾಸಕರ ಆಪ್ತ ಸಹಾಯಕರಾದ ಪಿ.ಜಿ. ಕೆಂಗನಾಳ, ಉಮೇಶ ಕೋರೆ, ಯಲಗೊಂಡ ಬಾಗಾದಿ, ಮುಖಂಡರಾದ ದಾದಾಸಾಹೇಬ ಬಾಗಾಯತ, ಸಚಿನ ಕೋರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net