

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ ಚೆಕ್ ಅನ್ನು ನಗರದಲ್ಲಿ ಇತ್ತೀಚೆಗೆ ವಿತರಿಸಲಾಯಿತು.
ಧಾರವಾಡ ಗ್ರಾಮೀಣ ಯೋಜನಾ ಕಚೇರಿ ವ್ಯಾಪ್ತಿಯ ಸಾಧನಕೇರಿ ವಲಯದ ವರಸಿದ್ಧಿ ವಿನಾಯಕ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 1.50 ಲಕ್ಷ ರೂ. ಮೊತ್ತದ ಚೆಕ್ ಅನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಸಂತ ಅರ್ಕಚಾರ ಮತ್ತು ಜಿಲ್ಲಾ ನಿರ್ದೇಶಕ ಪ್ರದಿಪ್ ಶೆಟ್ಟಿ ಅವರು ದೇವಸ್ಥಾನ ಕಮಿಟಿ ಸದಸ್ಯರಿಗೆ ವಿತರಿಸಿದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಎಸ್.ಎಸ್.ಕಂಬಿ, ಲೀಲಾವತಿ, ಯೋಜನಾಧಿಕಾರಿ ಮಯೂರ ತೋರಸ್ಕರ, ಒಕ್ಕೂಟದ ಪದಾಧಿಕಾರಿಗಳು, ದೇವಸ್ಥಾನ ಕಮಿಟಿ ಸದಸ್ಯರು, ಇತರರು ಇದ್ದರು. ಮಂಜುನಾಥ ಲಮಾಣಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು.