ಚನ್ನಮಲ್ಲ ಶ್ರೀಗಳ ಕಾರ್ಯ ಶ್ಲಾಘನೀಯ

pravachan
ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನವನ್ನು ಕಲ್ಲಯ್ಯಶಾಸ್ತ್ರೀಗಳು ನಡೆಸಿಕೊಟ್ಟರು. ಕಲ್ಮಠದ ಡಾ.ಚೆನ್ನಮಲ್ಲ ಸ್ವಾಮೀಜಿ ಇತರರಿದ್ದರು.
Published on

ಕನಕಗಿರಿ: ಆಧುನಿಕ ಆಕರ್ಷಣೆಯ ಭರಾಟೆಯಲ್ಲಿ ಮನುಷ್ಯ ದೇವಸ್ಥಾನಗಳಿಂದ ದೂರವಾಗುತ್ತಿದ್ದು, ಇದನ್ನು ಮನಗಂಡ ಶ್ರೀಗಳು ದೇವರೇ ಭಕ್ತರಡೆಗೆ ತರುವಂತಹ ಕಾರ್ಯಕ್ರಮವನ್ನು ರೂಪಿಸಿದ್ದಾರೆ ಎಂದು ಯಲಬುರ್ಗಾದ ಷ.ಬ್ರ. ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.


ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ ಸೋಮವಾರ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಿಂದ ಹಮ್ಮಿಕೊಂಡಿದ್ದ ಚನ್ನಮಲ್ಲ ಸ್ವಾಮೀಜಿಗಳು ಗ್ರಾಮದೆಡೆಗೆ, ಸರ್ವರೂ ಪರಿಪೂರ್ಣದೆಡೆಗೆ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದರು.


ಆಧ್ಯಾತ್ಮದಿಂದ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯ. ಆದರೆ ಆಧುನಿಕತೆ ಬೆಳದಂತೆ ಈ ಹಿಂದೆ ನಡೆಯುತ್ತಿದ್ದ ಪುರಾಣ, ಪ್ರವಚನಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದ ಆಧ್ಯಾತ್ಮದಿಂದ ಸಿಗುವ ನೆಮ್ಮದಿಯಿಂದ ವಿಮುಖನಾಗಿದ್ದಾರೆ. ಒತ್ತಡದ ಬದುಕಿನಲ್ಲಿ ಸಿಲುಕಿಕೊಂಡು ಸಂಬಂಧಗಳನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿಗೆ ತಲುಪಿದ್ದು, ನೆಮ್ಮದಿ ಬದುಕಿಗಾಗಿ ಹುಡುಕಾಟ ನಡೆಸುವಂತಾಗಿದೆ. ಅದಕ್ಕಾಗಿ ಚನ್ನಮಲ್ಲ ಸ್ವಾಮೀಜಿಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ಹಳ್ಳಿಗಳಿಗೆ ತೆರಳಿ ದುಶ್ಚಟಗಳನ್ನು ಭಿಕ್ಷೆ ಬೇಡಿ, ರುದ್ರಾಕ್ಷಿಧಾರಣೆ ಮಾಡಿ ಪ್ರವಚನದ ಮೂಲಕ ಆಧ್ಯಾತ್ಮದೆಡಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು. ಹೆಬ್ಬಾಳದ ಪ್ರಕಾಶ ಶರಣರು, ಅಬಲೂರು ದೇವರು, ಅರಳಹಳ್ಳಿ ದೇವರು ಇತರರಿದ್ದರು.

ಇದನ್ನೂ ಓದಿ: Purana Pravachana

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net