ಸುಂದರನಗರದ ಚೆನ್ನೈ ಸೂಪರ್ ಕಿಂಗ್ಸ್ ಪ್ರಥಮ

ಚಿಕ್ಕತ್ತೂರಿನ ಆನೆಕೆರೆ ಕ್ರೀಡಾ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಬಹುಮಾನ ವಿತರಿಸಿದರು. ಅನಂತು, ನವೀನ್, ವಾಸು, ವಿಜಯ್, ರವಿ ಗುಮ್ಮನಕೊಲ್ಲಿ, ಜಿಬಿ ರತ್ನಾಕರ್, ಸಣ್ಣಸ್ವಾಮಿ, ಚೇತನ್ ಬೋಪಯ್ಯ, ಇಬ್ರಾಹಿಂ, ಮಧುಚಂದ್ರ ಇತರರಿದ್ದರು.
ಚಿಕ್ಕತ್ತೂರಿನ ಆನೆಕೆರೆ ಕ್ರೀಡಾ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಬಹುಮಾನ ವಿತರಿಸಿದರು. ಅನಂತು, ನವೀನ್, ವಾಸು, ವಿಜಯ್, ರವಿ ಗುಮ್ಮನಕೊಲ್ಲಿ, ಜಿಬಿ ರತ್ನಾಕರ್, ಸಣ್ಣಸ್ವಾಮಿ, ಚೇತನ್ ಬೋಪಯ್ಯ, ಇಬ್ರಾಹಿಂ, ಮಧುಚಂದ್ರ ಇತರರಿದ್ದರು.
Published on

ಕುಶಾಲನಗರ: ಚಿಕ್ಕತ್ತೂರು ಮತ್ತು ದೊಡ್ಡತ್ತೂರು ಫ್ರೆಂಡ್ಸ್ ಬಳಗದ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಎರಡನೇ ವರ್ಷದ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಚಿಕ್ಕತ್ತೂರಿನ ಆನೆಕೆರೆ ಕ್ರೀಡಾ ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಕೂಡಿಗೆ ಸುತ್ತಮುತ್ತಲಿನ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತು ಕ್ರೀಡಾ ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯಲ್ಲಿ ಸುಂದರನಗರದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನ ಚಿಕ್ಕತ್ತೂರಿನ ಆರ್‌ಸಿಬಿ ತಂಡ, ಮೂರನೇ ಸ್ಥಾನಕ್ಕೆ ಎಸ್‌ವಿಕೆ ತಂಡ, ನಾಲ್ಕನೇ ಬಹುಮಾನವನ್ನು ವೀರಭದ್ರ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು.

ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟವನ್ನು ಚಿಕ್ಕತ್ತೂರು ಹಾಗೂ ದೊಡ್ಡತ್ತೂರು ಅವಳಿ ಗ್ರಾಮಗಳ ಸಮಾನಮನಸ್ಕರಾದ ಸಂತೋಷ್‌ಗೌಡ, ಸುನಿಲ್‌ಗೌಡ, ಕೃಷ್ಣೇಗೌಡ, ಪ್ರವೀಣ್, ಚೇತನ್‌ಕುಮಾರ್, ಪುಟ್ಟೇಗೌಡ ಆಯೋಜಿಸಿದ್ದರು.ಪಂದ್ಯಾವಳಿಯ ತೀರ್ಪುಗಾರರಾಗಿ ಗುಮ್ಮನಕೊಲ್ಲಿ ಗ್ರಾಮದ ಮಣಿ, ವಸಂತ ಹಾಗೂ ಖಾದರ್ ಕಾರ್ಯನಿರ್ವಹಿಸಿದರು.

ಪಂದ್ಯ ವಿಜೇತರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ವಿತರಿಸಿ ಮಾತನಾಡಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಗ್ರಾಮೀಣ ಪ್ರದೇಶಗಳ ಯುವ ಮನಸ್ಕರ ಮನರಂಜನೆಗೆ, ಪರಸ್ಪರ ಸ್ನೇಹ ಸೌಹಾರ್ದ ಬೆಸೆಯಲು ಇಂಥ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಹಳ್ಳಿಗಾಡು ಪ್ರದೇಶಗಳ ಯುವಕರು ದುಶ್ಚಟ ಹಾಗೂ ದುರಭ್ಯಾಸಗಳನ್ನು ದೂರವಿಟ್ಟು ಜಾಗೃತ ಸಮಾಜ ಕಟ್ಟಬೇಕು ಎಂದು ಸಲಹೆ ನೀಡಿದರು. ಕೂಡಿಗೆ ಗ್ರಾಪಂ ಸದಸ್ಯ ಅನಂತು, ಕುಶಾಲನಗರ ಪುರಸಭೆ ಸದಸ್ಯ ನವೀನ್, ಉದ್ಯಮಿ ವಾಸು, ವಿಜಯ್, ರವಿ ಗುಮ್ಮನಕೊಲ್ಲಿ, ಜಿಬಿ ರತ್ನಾಕರ್, ಸಣ್ಣಸ್ವಾಮಿ, ಚೇತನ್ ಬೋಪಯ್ಯ, ಇಬ್ರಾಹಿಂ, ಮಧುಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net