

ಬೆಳಗಾವಿ: ರೈತರ ಹೊಲದಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿ ಕಡಿಮೆ ಖರ್ಚಿನಲ್ಲಿ ಅಳವಡಿಸಬಹುದಾದ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯೇ ನೈಸರ್ಗಿಕ ಕೃಷಿ ಪದ್ಧತಿ ಎಂದು ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಹೇಳಿದರು.
ಮತ್ತಿಕೊಪ್ಪದ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ಈಚೆಗೆ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ತರಬೇತಿ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಕೃಷಿಗೆ ಹಸು ಮೂಲ ಆಧಾರ. ಹಸುವಿನ ಸಗಣಿ ಮತ್ತು ಗಂಜಲನ್ನು ನೈಸರ್ಗಿಕ ಕೃಷಿಗೆ ಬಳಸಲಾಗುವುದು. ದೇಸಿ ಹಸುಗಳನ್ನು ಸಂರಸಿ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ 6,875 ಎಕರೆ ೇತ್ರದಲ್ಲಿ ಅನುಷ್ಠಾನ ಗುರಿ ಹೊಂದಲಾಗದೆ ಎಂದರು.
ಕೇಂದ್ರದ ಕಾರ್ಯಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ನೈಸರ್ಗಿಕ ಕೃಷಿ ಅನುಸರಣೆಯಿಂದ ರೈತರು ತಮ್ಮ ಕುಟುಂಬದ ಆರೋಗ್ಯ ರಸಿ, ಆರ್ಥಿಕವಾಗಿ ಸಬಲರಾಗುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು. ಕೃಷಿ ಸಖಿಯರು ತರಬೇತಿಯಲ್ಲಿ ಕಲಿತ ವಿಷಯಗಳನ್ನು ರೈತರಿಗೆ ತಿಳಿಸಿ, ರಾಸಾಯನಿಕ ಮುಕ್ತ ಕೃಷಿ ಉತ್ತೇಜಿಸಬೇಕು ಎಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತರಬೇತಿ ಜವಾಬ್ದಾರಿಯನ್ನು ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಲಾಗಿದೆ. ಕಾರ್ಯಕ್ರಮದ ಭಾಗವಾಗಿ ಕೃಷಿ ಸಖಿಯರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಪ್ರಾತ್ಯಕೆ ಪರಿಕರಗಳ ಉತ್ಪಾದನೆ ಟಕ ಹಾಗೂ ಸಸ್ಯ ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.
ಜೀವಾಮೃತ ತಯಾರಿಕೆ ಪದ್ಧತಿ ಪ್ರಾತ್ಯಕೆ ನೆರವೇರಿಸಲಾಯಿತು. ತರಬೇತಿಯಲ್ಲಿ ವಿವಿಧ ತಾಲೂಕುಗಳ 40 ಕೃಷಿ ಸಖಿಯರು ಪಾಲ್ಗೊಂಡಿದ್ದರು.
ಕೃಷಿ ಇಲಾಖೆ ಉಪ ಜಂಟಿ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ್, ಸಹಾಯಕ ಕೃಷಿ ನಿರ್ದೇಶಕ ಸಿ.ಐ.ಹೂಗಾರ, ಬಸವರಾಜ ದಳವಾಯಿ, ಜಿ.ಬಿ.ವಿಶ್ವನಾಥ, ಪ್ರವಿಣ ಯಡಹಳ್ಳಿ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಇತರರಿದ್ದರು. ಕೇಂದ್ರದ ನೋಡಲ್ ಅಧಿಕಾರಿ, ಮಣ್ಣು ವಿಜ್ಞಾನಿ ಎಸ್.ಎಂ.ವಾರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ವಂದಿಸಿದರು.