ರಾಸಾಯನಿಕ ಗೊಬ್ಬರ ಬಳಕೆಯಿಂದ ಫಲವತ್ತತೆ ಹಾಳು

24 alvandi 04
ಅಳವಂಡಿ ಸಮೀಪದ ಹಟ್ಟಿಯಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ,ಎಣ್ಣೆಕಾಳು ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಉದ್ದೇಶಿಸಿ ಎಒ ಪ್ರತಾಪಗೌಡ ಮಾತನಾಡಿದರು. ಪ್ರಮುಖರಾದ ಎಚ್.ಎಸ್.ಹೊನ್ನುಂಚಿ, ತಾರಾ, ಮೀರಾ, ಅಪ್ಪು, ವೆಂಕಟೇಶ, ಗವಿಸಿದ್ದಪ್ಪ, ಸಂತೋಷ ಇತರರು ಇದ್ದರು.
Published on

ಅಳವಂಡಿ: ರೈತರು ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಸುತ್ತಿದ್ದು, ಇದರಿಂದ ಭೂಮಿ ವಿಷಯುಕ್ತವಾಗುವ ಜತೆಗೆ ಕೆಲ ವರ್ಷಗಳಲ್ಲಿ ಬಂಜರು ಆಗುವ ಸಾಧ್ಯತೆ ಇದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರತಾಪಗೌಡ ಪಾಟೀಲ ಹೇಳಿದರು.

ಸಮೀಪದ ಹಟ್ಟಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ತರಬೇತಿ ಶಿಬಿರ ಉದ್ದೇಶಿಸಿ ಮಾತನಾಡಿದರು.

ಮಣ್ಣಿಗೂ ಕೂಡ ಜೀವ ಇದೆ. ಭೂಮಿಗೆ ಅವಶ್ಯಕತೆಗಿಂತ ಹೆಚ್ಚು ರಾಸಾಯನಿಕಗಳನ್ನು ಬಳಸದೆ ಹಸಿರೆಲೆ ಗೊಬ್ಬರ, ಸೆಗಣಿ ಗೊಬ್ಬರ ಮುಂತಾದ ಸಾವಯವ ಗೊಬ್ಬರ ಬಳಸಬೇಕು. ಭೂಮಿಯನ್ನು ಜೀವಂತವಾಗಿಡಬೇಕು ಅಂದಾಗ ಮಾತ್ರ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಬಿತ್ತುವ ಮುಂಚೆ ಬೀಜೋಪಚಾರ ಮಾಡಬೇಕು ಎಂದರು.

ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣ ಸಂಸ್ಥೆಯ ತರಬೇತಿ ಸಂಯೋಜಕ ಎಚ್.ಎಸ್.ಹೊನ್ನುಂಚಿ ಮಾತನಾಡಿ, ಫಲವತ್ತಾದ ಹಾಗೂ ಪೋಷಕಾಂಶಗಳನ್ನು ಹೊಂದಿದ ಭೂಮಿಯಿಂದ ಸಮೃದ್ಧ ಬೆಳೆ ಬೆಳೆಯಬಹುದು. ಬಿತ್ತನೆಗೆ ಪೂರ್ವ ಜಮೀನನ್ನು ಹದಮಾಡಿಕೊಳ್ಳಬೇಕು. ಎಣ್ಣೆಕಾಳು ಯೋಜನೆ ಅಡಿಯಲ್ಲಿ ಸರ್ಕಾರ ಯೋಜನೆ ಜಾರಿಗೊಳಿಸಿದ್ದು, ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.

ರೈತರಾದ ದೇವೆಂದ್ರ, ಲಕ್ಕಪ್ಪ, ಗುಡದಪ್ಪ, ರಾಮಪ್ಪ, ಈರಪ್ಪ, ಗುಡದಪ್ಪ, ಮರಿಯಪ್ಪ, ನಾಗಪ್ಪ, ಪಕೀರಪ್ಪ, ಕೊಟೆಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net