

ಗೌರಿಬಿದನೂರು : ತಾಲೂಕಿನ ಚಿಕ್ಕಕುರುಗೋಡು ಬಳಿಯ ಪ್ರಿಕಾಟ್ ಮಿಲ್‌ನಲ್ಲಿ ರಾಸಾಯನಿಕಗಳ ಮಿಶ್ರಣ ಮಾಡುವಾಗ ಸೋಡಿಯಂ ಹೈಡ್ರಾಕೈ ್ಸಡ್ ದ್ರಾವಣ ಸಿಡಿದು ಐವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಸಂಭವಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ರವಿ, ವೆಂಕಟೇಶ್, ಹರೀಶ್ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ಗೋರಯ್ಯ ಮತ್ತು ಆನಂದ್ ಕುಮಾರ್ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವೃತ್ತ ನಿರೀಕ್ಷಕ ಶಶಿಧರ್, ಎಸ್‌ಐ ವಿಜಯಕುಮಾರ್ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ದ್ರಾವಣ ಸ್ಫೋಟಕ್ಕೆ ಕಾರಣ?: ಹೆಚ್ಚಿನ ದ್ರಾವಣವನ್ನು ಬೆರೆಸಿದ ಬಾಯ್ಲರ್ ಅನ್ನು ಸ್ಥಳಾಂತರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳಾಂತರಿಸುವ ವೇಳೆ ಹೆಚ್ಚುವರಿ ದ್ರಾವಣ ಕಾರ್ಮಿಕರ ಮೇಲೆ ಬಿದ್ದಿದ್ದು, ಮೂವರು ಕಾರ್ಮಿಕರ ದೇಹದ ಹೆಚ್ಚಿನ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಆದರೆ, ಕಾರ್ಖಾನೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಕಾರ್ಮಿಕರು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಾಂತರದ ವೇಳೆ ಎಡವಟ್ಟು: ಕಳೆದ 25 ವರ್ಷಗಳಿಂದಲೂ ಪ್ರಿಕಾಟ್ ಮಿಲ್ ಕಾರ್ಯನಿರ್ವಹಿಸುತ್ತಿದೆ. ಕಾಟನ್ ಸೀರೆಗಳಿಗೆ ಬಣ್ಣ ಹಾಕುವಿಕೆಯ ಕಾರ್ಖಾನೆ ಇದಾಗಿದೆ. ನಿಯಮಾನುಸಾರ ಬ್ಲಾಯರ್‌ಗಳಿಗೆ ರಾಸಾಯನಿಕಗಳನ್ನು ಹಾಕಿ, ಬಳಿಕ ಪೈಪ್ ಲೈನ್ ಮೂಲಕ ಯಂತ್ರಗಳಿಗೆ ಕಳುಹಿಸಲಾಗುತ್ತದೆ. ಆದರೆ, ಬ್ಲಾಯರ್ ಅನ್ನು ಗುರುವಾರ ಕಾರ್ಖಾನೆಯೊಳಗಿನಿಂದ ಹೊರಗಡೆ ಸಾಗಿಸಲು ಕಾರ್ಮಿಕರು ಮುಂದಾಗಿದ್ದಾರೆ. ಇದೇ ವೇಳೆ ಹೆಚ್ಚಿನ ಪ್ರಮಾಣದ ರಾಸಾಯನಿಕ ಹೊಂದಿದ್ದ ಹಿನ್ನೆಲೆಯಲ್ಲಿ ಬ್ಲಾಯರ್ ಸ್ಫೋಟ ಸಂಭವಿಸಿದೆ. ತಕ್ಷಣವೇ ಕಾರ್ಮಿಕರು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಿಕಾಟ್ ಮಿಲ್ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗಿದೆ. ಐವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬ್ಲಾಯರ್‌ಗೆ ಹೆಚ್ಚಿನ ರಾಸಾಯನಿಕ ಮಿಶ್ರಣ ಮಾಡಿರುವುದರ ಬಗ್ಗೆ ಸಹೋದ್ಯೋಗಿಗಳ ಗಮನ ಸೆಳೆಯಲಾಯಿತು. ಅಷ್ಟರೊಳಗೆ ದಿಢೀರ್ ಸ್ಫೋಟ ಸಂಭವಿಸಿತು. ಬಳಿಕ ಭಯದಲ್ಲಿ ಏನಾಯಿತು ಎಂಬುದು ಗೊತ್ತಾಗಲಿಲ್ಲ. ಗೋರಯ್ಯ, ಗಾಯಾಳು ಕಾರ್ಮಿಕ