ಚೆಂಬು ಗ್ರಾಮ ಪಂಚಾಯಿತಿಯಲ್ಲಿ ರಕ್ತದಾನ ಶಿಬಿರ

16mdkf1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಚೆಂಬು ಗ್ರಾಮ ಪಂಚಾಯಿತಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಭಗವಾನ್ ಯುವಕ ಸಂಘ ,ಮಿತ್ರಕೂಟ ಕ್ರೀಡಾ ಸಂಘ ಇವರ ಸಹಯೋಗದೊಂದಿಗೆ ಮಡಿಕೇರಿಯ ರಕ್ತ ನಿಧಿ ಕೇಂದ್ರದಿಂದ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ. ಧನಂಜಯ ಉದ್ಘಾಟಿಸಿದರು. ಚೆಂಬು ಗ್ರಾಪಂ ಅಧ್ಯಕ್ಷೆ ಕುಸುಮ ಯೋಗೇಶ್ವರ್, ಮಡಿಕೇರಿ ರಕ್ತನಿಧಿ ಕೇಂದ್ರ ಮುಖ್ಯಸ್ಥ ಡಾ.ಕೆ.ಪಿ. ಕರುಂಬಯ್ಯ, ಭಗವಾನ್ ಯುವಕ ಸಂಘ ಅಧ್ಯಕ್ಷ ಹನಿಯಡ್ಕ ಯತೀಶ್, ಮಿತ್ರಕೂಟ ಕ್ರೀಡಾ ಸಂಘ ಅಧ್ಯಕ್ಷ ಊರುಬೈಲು ಪ್ರಶಾಂತ್ ಮಾತನಾಡಿದರು.

ಎಂ. ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಪವಿತ್ರ ಪ್ರಾರ್ಥಿಸಿದರು. ಕೆ.ಬಿ. ಉಷಾರಾಣಿ ನಿರೂಪಿಸಿದರು. ಕೆ.ಯು. ರಂಜಿತ್ ವಂದಿಸಿ ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net