

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತಗಟ್ಟೆ ಅಧಿಕಾರಿ ಹಾಗೂ ಬೂತ್ ಅಧ್ಯಕ್ಷರ ಪೂರ್ವಭಾವಿ ಸಭೆ ಚೆಂಬು ಗ್ರಾಮದಲ್ಲಿ ಮಂಗಳವಾರ ನಡೆಯಿತು.
ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎ.ಎಸ್. ಪೊನ್ನಣ್ಣ ಪಾಲ್ಗೊಂಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಅಧ್ಯಕ್ಷರು ಹಾಗೂ ಬಿಎಲ್ಎಗಳಿಗೆ ಅಗತ್ಯ ಸಲಹೆ ನೀಡಿ ದರು.
ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಯೋಗೇಶ್ವರ್, ಉಪಾಧ್ಯಕ್ಷೆ ಶಶಿಕಲಾ ಕಟ್ಟೆಪಾರೆ, ಸದಸ್ಯರಾದ ಗಿರೀಶ್ ಹೊಸೂರು, ಮಹಿಳಾ ಕಾಂಗ್ರೆಸ್ ವಲಯ್ಯಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯಿತಿ ಮಾಜಿ ಸದ್ಯ ಮೊಯ್ದಿನ್ ಕುಂಞಿ ಕೊಯ್ನಡು, ಪ್ರಮುಖರಾದ ಎನ್. ಸಿ. ಮನೋಹರ್, ಸುನಿಲ್ ಸುಬ್ಬಪ್ಪ, ಜಿ.ವಿ. ಗಣಪಯ್ಯ, ಸೋಮಣ್ಣ ಬಾಲಂಬಿ, ಮದನ್‌ಕುಮಾರ್, ಅಜಿತ್, ಅರುಣೋದಯ ಕುಮಾರ್, ಪ್ರಶಿನ್, ರಘುನಾಥ್ ಬಾಲಂಬಿ, ಶಿವರಾಂ ಕೊಪ್ಪದ, ಚೆನ್ನಪ್ಪ ನಡುಬೆಟ್ಟು, ಚೆನಿಯಪ್ಪ ಕುದುರೆಪಾಯ, ಉದಯ ಹೊದ್ದಟ್ಟಿ, ಮನೋಹರ್ ಏಣಿಯಾರ, ಕವಿ ಹೊಸೂರು, ದಿವ್ಯಾ, ಸೂರಜ್ ಹೊಸೂರು ಮತ್ತಿತರರು ಇದ್ದರು. ಅನಾರೋಗ್ಯ ಪೀಡಿತ ರವಿ ಬೊಳುಗಲ್ಲು ಅವರ ಚಿಕಿತ್ಸೆಗೆ ಎ.ಎಸ್. ಪೊನ್ನಣ್ಣ ಆರ್ಥಿಕ ನೆರವು ನೀಡಿದರು.