ಕಾಂಗ್ರೆಸ್​ ಪಾಪ್ಯುಲಾರಿಟಿ ಸಹಿಸಲಾರದೆ ಬಿಜೆಪಿಯವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ

Chaluvarayaswamy
Published on

ಮಂಡ್ಯ: ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಸರಬರಾಜು ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದ್ದು, ಬಿಜೆಪಿಯವರು ಇಂತಹ ಕೆಲಸ ಮಾಡ್ತಾರೆ ಎಕ್ಸಪೆಟ್​ ಮಾಡಿರಲಿಲ್ಲ ಎಂದು ಕೃಷ್ಇ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಈ‌ ದೇಶ, ಪ್ರಪಂಚದಲ್ಲಿ ಎಲ್ಲಿಯೂ ಇಂತಹದನ್ನು ನೋಡೋಕೆ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇಂತಹದನ್ನು ನೋಡೋಕೆ ಆಗುವುದಿಲ್ಲ

ಬಿಜೆಪಿಯವರು ಇಂತಹ ಕೆಲಸ ಮಾಡ್ತಾರೆ ಎಕ್ಸಪೆಟ್​ ಮಾಡಿರಲಿಲ್ಲ. ಈ‌ ದೇಶ, ಪ್ರಪಂಚದಲ್ಲಿ ಎಲ್ಲಿಯೂ ಇಂತಹದನ್ನು ನೋಡೋಕೆ ಆಗುವುದಿಲ್ಲ. ಎರಡು ಲಕ್ಷ ಟನ್ ಅಕ್ಕಿ ಸ್ಟೋರೇಜ್​ ಮಾಡಿದ್ದಾರೆ. ಭಾರತೀಯ ಆಹಾರ ನಿಗಮದವರೇ ಮೊದಲಿಗೆ ಪತ್ರ ಬರೆದು ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಹಾಗೆ ಮಾಡಿದ್ದಲ್ಲಿ ಕಾಂಗ್ರೆಸ್​ಗೆ ಎಲ್ಲಿ ಪಾಪ್ಯುಲಾರಿಟಿ ಬರುತ್ತದೆ ಎಂದು ಅಕ್ಕಿ ಕೊಡುವುದಿಲ್ಲ ಎಂದು ಉಲ್ಟಾ ಹೊಡೆದಿದ್ಧಾರೆ.

ವಿರೋಧ ಪಕ್ಷದ ಸರ್ಕಾರಗಳು ಜನಪರ ಕಾರ್ಯಕ್ರಮಗಳಿಗೆ ಹೇಗೆ ಅಡೆತಡೆ ಮಾಡ್ತಾರೆ, ಹೇಗೆ ನಡೆದುಕೊಳ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಮುಗಿಬಿದ್ದಿದ್ಧಾರೆ.

ಗೌರವಯುತವಾಗಿ ಆಡಳಿತ ನಡೆಸಿದ್ದೇವೆ

ಬಿಜೆಪಿ ಶಾಸಕ ವಿಜಯೇಂದ್ರ ಬೇರೆ ರಾಜ್ಯದಿಂದ ಅಕ್ಕಿ ಖರೀದಿಸುವ ನೆಪದಲ್ಲಿ ಕಮಿಷನ್​​ ಆರೋಪಕ್ಕೆ ಪ್ರತಿಕ್ರಿಯಿಸಿ ನಾವು ದಂಧೆ ಮಾಡೋದು ಬೇಡಾ, ಇನ್ನೊಂದು ಮಾಡೋದು ಬೇಡಾ ಮೊದಲು ಗೋಡೌನ್​ನಲ್ಲಿರುವ ಅಕ್ಕಿಯನ್ನು ಕೊಡಲು ಹೇಳಿ. ಇಚರು ಅಕ್ಕಿ ಕೊಡೋದನ್ನ ನಿಲ್ಲಿಸಿದ್ದಕ್ಕೆ ನಾವು ಇನ್ನೊಂದು ರಾಜ್ಯದವರ ಬಳಿ ಹೋಗಿ ಕೇಳಬೇಕಾಯಿತು.

ಸ್ವತಂತ್ರ ಬಂದಾಗಿನಿಂದಲೂ ಕಾಂಗ್ರೆಸ್​ ಗೌರವಯುತವಾಗಿ ಆಡಳಿತ ನಡೆಸುತ್ತಾ ಬಂದಿದೆ. ಬಿಜೆಪಿಯವರಿಂದ ನಾವು ಪಾಠವನ್ನು ಕಲಿಯುವ ಅವಶ್ಯಕತೆಯಿಲ್ಲ. ವಿಜಯೇಂದ್ರ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಅವರಿಗೆ ಗೌರವ ತರುವ ನಿಟ್ಟಿನಲ್ಲಿ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಶಾಸಕ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ್ಧಾರೆ.

ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರದಿಂದ ದೂರವಿರುವ ಸರ್ಕಾರ. ನಾವು ಜನರಿಗೆ ಕೊಡಬೇಕಾದ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅಡಚಣೆ ಮಾಡ್ತಿದೆ. ಯಾವ ರಾಜ್ಯದಿಂದ ಎಷ್ಟೆಷ್ಟು ಅಕ್ಕಿ ಸಿಗುತ್ತಿದೆ ಅದಕ್ಕೆ ನಾವು ಸರ್ಚ್ ಮಾಡ್ತಿದ್ದೇವೆ. ಸಿಎಂ, ಆಹಾರ ಸಚಿವರು ಇದನ್ನ ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಜನರಿಗೆ ಕಾರ್ಯಕ್ರಮ ಕೊಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೀಟೆ ಮಾಡಬೇಕಲ್ವ

ಮತಾಂತರ ನಿಷೇಧ, ಗೋ ಹತ್ಯೆ ಕಾಯ್ದೆ ವಾಪಸ್​ ವಿರೋಧಿಸಿ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ವಿಷಯ. ನಾವು ಮಾಡುತ್ತೀವೋ ಇಲ್ಲವೋ ಬಿಜೆಪಿಯವರು ಸ್ಟಾರ್ಟ್​ ಮಾಡಿ ಬಿಡುತ್ತಾರೆ. ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆದ್ದರಿಂದ ಏನಾದರೂ ತೀಟೆ ಮಾಡಬೇಕಲ್ವ ಎಂದು ಹೀಗೆ ಮಾಡುತ್ತಾ ಇದ್ದಾರೆ.

ಕಾಂಗ್ರೆಸ್​ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂಬ ಸಚಿವ ಆರ್​.ಅಶೋಕ್​ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಇಂಟರ್​​ನ್ಯಾಷನಲ್​ ಲೀಡರ್​ ಬಿಡಿ. ಅವರ ಮಾತನ್ನು ಕೇಳಲೇಬೇಕು. ಬಿಜೆಪಿಯವರು ಹೇಳಿದಂತೆ ಕರ್ನಾಟಕವನ್ನು ರಾಮರಾಜ್ಯ ಮಾಡಿದ್ರಾ ಎಂದು ಪ್ರಶ್ನಿಸಿದ್ಧಾರೆ.

ನಿಜವಾದ ರಾಮರಾಜ್ಯ ಮಾಡಿದ್ದರೆ ಅದು ಕಾಂಗ್ರೆಸ್​ನವರಿಂದ ಮಾತ್ರ ಸಾಧ್ಯ. ಅಶೋಕ್​ ನಾಲಿಗೆ ಮೇಲೆ ಹಿಡಿತ ಇಲ್ಲದವರಂತೆ ಮಾತನಾಡುತ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ ಬಿಜೆಪಿ ನಾಯಕರಿಗೆ ಟಾಂಗ್​ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net