ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವ

16mlk1
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬುಧವಾರ ತಡರಾತ್ರಿ ನಡೆದ ಚೆಲುವನಾರಾಯಣಸ್ವಾಮಿಯ ಅಶ್ವವಾಹನೋತ್ಸವ.
Published on

 ಮೇಲುಕೋಟೆ: ತವರು ಮನೆಗೆ ಹೋಗಿ ತಡವಾಗಿ ದೇವಾಲಯಕ್ಕೆ ಬಂದ ಶ್ರೀದೇವಿ-ಭೂದೇವಿಯರೊಂದಿಗೆ ಮುನಿಸಿಕೊಂಡ ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವದಲ್ಲಿ ಸಾಗುವ ವಿಶೇಷ ಕ್ಷಣಗಳನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಬುಧವಾತ ತಡರಾತ್ರಿ 12 ಗಂಟೆಗೆ ನಡೆದ ಈ ವೈಶಿಷ್ಠಪೂರ್ಣ ಕ್ಷಣಗಳಿಗಾಗಿ ಕಾಯ್ದುಕುಳಿತಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ವಿಶೇಷ ನಡಿಗೆಯೊಂದಿಗೆ ಬಂದ ಸ್ವಾಮಿಯ ಉತ್ಸವ ಹಾಗೂ ಮಂಗಳವಾದ್ಯದೊಂದಿಗೆ ಸಾಗಿದ ಅಶ್ವವಾಹನೋತ್ಸವದ ದರ್ಶನ ಪಡೆದು ಪುನೀತರಾರದು. ಅಲ್ಲದೆ ಅಶ್ವವಾಹನೋತ್ಸವನ್ನು ಹಿಂಬಾಲಿಸಿ ಮೊಲ ಅಡ್ಡಬಿಡುವ ಕ್ಷಣಗಳಿಗೂ ಸಾಕ್ಷಿಯಾದರು.

ದೇವಿಯರೊಂದಿಗೆ ಮುನಿಸಿಕೊಂಡು ಹೊರಟ ಚೆಲುವರಾಯನಿಗೆ ಮೂರು ಮೊಲ ಅಡ್ಡಬಂದಾಗ ಸ್ವಾಮಿ ಮರಳಿ ದೇವಾಲಯಕ್ಕೆ ಹಿಂದಿರುಗಿದರು ಎಂಬುದು ಐತಿಹ್ಯ. ಇದರಲ್ಲಿ ಅಂಗಮಣಿಯ ಉತ್ಸವದಲ್ಲಿ ಪ್ರಮುಖ ಘಟ್ಟವಾಗಿದ್ದು ಅಶ್ವವಾಹನದೊಂದಿಗೆ ಸಾಗಿದ ಸಹಸ್ರಾರು ಭಕ್ತರು ಮೊಲ ಅಡ್ಡಬಂದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.

ದೀಪಾಲಂಕಾರ ಮಾಡದ್ದಕ್ಕೆ ಅಸಮಾಧಾನ: ಪ್ರಖ್ಯಾತ ಅಂಗಮಣಿ ಮತ್ತು ಸಂಕ್ರಾಂತಿ ಉತ್ಸವಗಳ ವೇಳೆಯಲ್ಲಾದರೂ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ದೇವಾಲಯದ ವತಿಯಿಂದ ಸರಳ ದೀಪಾಲಂಕಾರ ಮಾಡಿದ್ದರೆ ಉತ್ಸವದ ಮೆರಗು ಹೆಚ್ಚುತ್ತಿತ್ತು. ದೇವಾಲಯದ ಅಧಿಕಾರಿ ನಿರ್ಲಕ್ಷ್ಯವಹಿಸಿ ಕಳೆದ ಸಲ ದೀಪಾಲಂಕಾರ ಮಾಡಿರಲಿಲ್ಲ ಈ ವರ್ಷವೂ ಮಾಡಿಲ್ಲ. ಪ್ರಶ್ನಿಸಿದರೆ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net