ಚೆಲುವನ’ ರಾಜಮುಡಿ ತೆಪ್ಪೋತ್ಸವ ಇಂದು

10mlk4
ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ಕಲ್ಯಾಣಿಗೆ ಮಾಡಿದ ದೀಪಾಲಂಕಾರ.
Published on

 ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ರಾಜಮುಡಿ ತೆಪ್ಪೋತ್ಸವ ಏ.11ರಂದು ರಾತ್ರಿ ಜರುಗಲಿದ್ದು, ಮೇಲುಕೋಟೆ ಕಲ್ಯಾಣಿ ಸಜ್ಜುಗೊಂಡಿದೆ.

ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಕಲ್ಯಾಣಿಯ ಇಡೀ ಸಮುಚ್ಛಯಕ್ಕೆ ಝಗಮಗಿಸುವ ದೀಪಾಲಂಕಾರ ಮಾಡಲಾಗುತ್ತಿದ್ದು, ತೆಪ್ಪೋತ್ಸವ ಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗುತ್ತಿದೆ.

ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹಕಾರದಲ್ಲಿ ತೆಪ್ಪೊತ್ಸವವನ್ನು ವಿಭಿನ್ನ ರೀತಿಯಲ್ಲಿ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಿದ ಪರಿಣಾಮ ತೆಪ್ಪೋತ್ಸವ ಮೂರೂ ಸುತ್ತಿನ ವೇಳೆಯೂ ವೈಷ್ಣವ ಸಂಪ್ರದಾಯ ಹಾಗೂ ಭಕ್ತಿಸಿಂಚನ ನೀಡುವ ಮ್ಯಾಂಡಲಿನ್, ಕರ್ನಾಟಕ ಸಂಗೀತ ಹಾಡುಗಾರಿಕೆ, ಭರತನಾಟ್ಯ, ಚಂಡೆ ಮತ್ತು ನಾದಸ್ವರ ವಾದನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಅತ್ಯತ್ತಮ ಗುಣಮಟ್ಟದ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಕಲ್ಯಾಣಿಯ ಬಳಿ ಸ್ಕೈಶಾಟ್ಸ್ ಪಟಾಕಿಗಳನ್ನು ಸಿಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತೆಪ್ಪೋತ್ಸವ ರಾತ್ರಿ 7ರಿಂದ ಆರಂಭವಾಗಲಿದೆ.

ರಾಜಮುಡಿ ಧರಸಿದ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ದೃಶ್ಯ ವೀಕ್ಷಣೆಗೆ ಕಲ್ಯಾಣಿಯ ನಾಲ್ಕೂಕಡೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿದ್ದು, ಆ ಮೂಲಕ ಭಕ್ತರಿಗೆ ಭಗವಂತನ ದಿವ್ಯದರ್ಶನ ಮಾಡಿಸಲು ಯೋಜಿಸಲಾಗಿದೆ. ವೈರಮುಡಿಯ ವಿಶೇಷ ತೆಪ್ಪೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಆನಂದಾಳ್ವಾರ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net