ದೊಡ್ಡೇರಿ ವಿಶ್ವನಾಥ್ ಚೀಲೂರು ಕೃಷಿ ಸಂಘ ನಿರ್ದೇಶಕ

Cheilur, Agriculture Association, President, elected,
Published on

ನ್ಯಾಮತಿ: ತಾಲೂಕಿನ ಚೀಲೂರು ಕೃಷಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ನ್ಯಾಮತಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡೇರಿ ಡಿ.ಜಿ.ವಿಶ್ವನಾಥ್ ಆಯ್ಕೆಯಾಗಿದ್ದಾರೆ.

ಸಿ.ಎಲ್.ಶಿವಾನಂದಪ್ಪ ರಾಜೀನಾಮೆ ನೀಡಿದ್ದರಿಂದ ತೆರವಾಗಿದ ಸ್ಥಾನಕ್ಕೆ ಡಿ.ಜಿ. ವಿಶ್ವನಾಥ್ ಅವರನ್ನು ಶನಿವಾರ ಆಯ್ಕೆ ಮಾಡಲಾಗಿದೆ.

ಡಿಸಿಸಿ ಬ್ಯಾಂಕ್ ನ್ಯಾಮತಿ ವೃತ್ತದ ಕ್ಷೇತ್ರಾಧಿಕಾರಿ ಎಚ್.ಬಿ.ಸುರೇಶ್, ಚೀಲೂರು ಗ್ರಾಮದ ಕೃಷಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ರಾಜಪ್ಪ, ಉಪಾಧ್ಯಕ್ಷೆ ಮಂಜುಳಮ್ಮ, ನಿರ್ದೇಶಕರಾದ ಜಿ.ಪಿ. ಮಲ್ಲೇಶಪ್ಪ, ಬಿ.ಮಾನಪ್ಪ, ಒ.ಬಿ.ರಾಜಪ್ಪ, ಕೆ.ಜಿ.ರಾಜಪ್ಪ, ಎಚ್.ಬಿ.ಪಾಲಕ್ಷಪ್ಪ, ಎಚ್.ಕೆ.ಪಾಲಕ್ಷಪ್ಪ, ಜಿ.ಆರ್.ಗಿರೀಶಕುಮಾರ್, ರಾಮಪ್ಪ ಟಿ.ಕೆ. ಎಸ್.ಮಲ್ಲಮ್ಮ, ಪ್ರಭಾರ ಸಿಇಒ ಕೆ. ನಾಗರಾಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net