ಚೀಟಿ ಗಲಾಟೆ ಕೊಲೆಯಲ್ಲಿ ಅಂತ್ಯ

22 TKE 2B (CRIME)
Published on

ತರೀಕೆರೆ: ಅಮೃತಾಪುರ ತಾಂಡದಲ್ಲಿ ಚೀಟಿ ವಿಚಾರಕ್ಕೆ ನಡೆದ ಗಲಾಟೆ ಯುವಕನೊಬ್ಬನ

ಕೊಲೆಯಲ್ಲಿ ಅಂತ್ಯವಾಗಿದೆ.

ಅಮೃತಾಪುರ ತಾಂಡದಲ್ಲಿ ಸೇವಾಲಾಲ್ ಸಂಘದ ಚೀಟಿಯಿಂದ ಹೊರ ಹಾಕಿರುವ ವಿಚಾರಕ್ಕೆ

ಆರೋಪಿ ರುದ್ರೇಶ್‌ನಾಯ್ಕ (26),ಯಶವಂತ್‌ನಾಯ್ಕ (20) ಮತ್ತು ಕೊಲೆಯಾದ

ಸಂಜುನಾಯ್ಕ (26) ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ಗಲಾಟೆಗೆ ತಿರುಗಿದ

ಕಾರಣ ಕೆರಳಿದ ಆರೋಪಿ ರುದ್ರೇಶ್‌ನಾಯ್ಕ, ಯಶವಂತ್‌ನಾಯ್ಕನ ಎದೆಗೆ ಹಲ್ಲಿನಿಂದ ಕಚ್ಚಿ

ತಳ್ಳಿ ಬೀಳಿಸಿ ಪಕ್ಕದಲ್ಲೇ ಬಿದ್ದಿದ್ದ ದೊಣ್ಣೆ ತೆಗೆದು ಸಂಜುನಾಯ್ಕನ ತಲೆಗೆ ಹೊಡೆದಿದ್ದಾನೆ.

ದೊಣ್ಣೆಯಿಂದ ಬೀಸಿದ ಬಲವಾದ ಹೊಡೆತಕ್ಕೆ ಸಂಜುನಾಯ್ಕ ನೆಲಕ್ಕೆ ಕುಸಿದು ಬಿದ್ದು

ಕೊನೆಯುಸಿರೆಳೆದಿದ್ದಾನೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ತರೀಕೆರೆ ಪೊಲೀಸರು ಪರಿಶೀಲನೆ ನಡೆಸಿ

ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಿ ದೂರು ದಾಖಲಾದ 2 ಗಂಟೆ

ಅವಧಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪೊಲೀಸ್

ಇನ್ಸ್‌ಪೆಕ್ಟರ್ ರಾಮಚಂದ್ರನಾಯ್ಕ, ಪಿಎಸೈ ನಾಗೇಂದ್ರನಾಯ್ಕ ಕಾರ್ಯಚರಣೆಯಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net