ಚಿರತೆ ದಾಳಿಗೆ ಎತ್ತು ಬಲಿ

IMG-20200115-WA0017.jpg
Published on

ಹೊಸಪೇಟೆ (ಬಳ್ಳಾರಿ): ತಾಲೂಕಿನ ಬೈಲುವದ್ದಿಗೆರೆ ಗ್ರಾಮದ ಬಳಿ ಬುಧವಾರ ಬೆಳಗ್ಗೆ ರೈತ ಉಳ್ಳಾಗಡ್ಡಿ ವೀರಣ್ಣ ಎಂಬುವರ ಎತ್ತು ಚಿರತೆ ದಾಳಿಗೆ ಬಲಿಯಾಗಿದೆ.

ಚಿರತೆ ಹಿಡಿಯುವಂತೆ ರೈತರು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಲುವದ್ದಿಗೆರೆ, ಗುಂಡ್ಲವದ್ದಿಗೆರೆ ಗ್ರಾಮಗಳ ಸುತ್ತಮುತ್ತ ಚಿರತೆ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net