ಚಿರತೆ ದಾಳಿಯಿಂದ ಯುವಕನಿಗೆ ಗಾಯ

9 arasikere- cheeta
Published on

ಅರಸೀಕೆರೆ: ಕುರಿ ಮೇಯಿಸಲು ತೆರಳಿದ್ದ ಯುವಕನ ಮೇಲೆ ಶನಿವಾರ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ಹೊಸ ಕಲ್ಲನಾಯ್ಕನಹಳ್ಳಿ ಗ್ರಾಮದ ಸಿದ್ದೇಶ್ ಗಾಯಗೊಂಡಿದ್ದು, ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂದಿನಂತೆ ಈತ ಕುರಿ ಮೇಯಿಸಲು ಕೆರೆ ಬಳಿ ತೆರಳಿದ್ದ. ಪೊದೆಯಲ್ಲಿ ಅಡಗಿದ್ದ ಚಿರತೆ ಕುರಿ ಹಿಂಡಿನ ಮೇಲೆ ದಾಳಿ ಮಾಡಿದೆ. ಕುರಿ ರಕ್ಷಣೆಗೆ ಧಾವಿಸಿದ ಸಿದ್ದೇಶ್ ಮೇಲೆ ಚಿರತೆ ದಾಳಿ ಮಾಡಿ ಕುತ್ತಿಗೆ, ಕೈಗೆ ಕಚ್ಚಿದೆ. ಸಿದ್ದೇಶ್ ಚೀರಾಟ ಕೇಳಿ ಧಾವಿಸಿದ ಕೃಷಿಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net