ಚಿರತೆ ದಾಳಿಗೆ ಕರು ಬಲಿ ಉಜ್ಜನಿ ಬೆಟ್ಟದ ತಪ್ಪಲಿನ ಜನರಿಗೆ ಆತಂಕ

Published on

ಗ್ರಾಮಾಂತರ ಸಾಸಲು ಹೋಬಳಿಯ ಪಚ್ಚಾರಲಹಳ್ಳಿ ಸಮೀಪದ ತೋಟದ ಮನೆಗೆ ಶನಿವಾರ ಚಿರತೆ ನುಗ್ಗಿ ಕರುವನ್ನು ಕೊಂದು ಹಾಕಿದೆ.

ತೋಟದ ಮನೆಯಲ್ಲಿ ವಾಸವಾಗಿದ್ದ ರೈತ ಮುತ್ತರಾಯಪ್ಪ ಕಣ್ಣೆದುರಿನಲ್ಲೆ ದಾಳಿ 1 ವರ್ಷದ ಕರುವನ್ನು ಕೊಂದಿದೆ. ಮುತ್ತರಾಯಪ್ಪ ಗದ್ದಲ ಮಾಡಿದ್ದರಿಂದ ಅಕ್ಕಪಕ್ಕದ ರೈತರು ಓಡಿ ಬಂದಿದ್ದಾರೆ. ಗಾಬರಿಗೊಂಡ ಚಿರತೆ ಕರು ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮಾಕಳಿ ಹಾಗೂ ಹುಲ್ಕುಡಿ ಬೆಟ್ಟದಲ್ಲಿ ಚಿರತೆಗಳು ಹೆಚ್ಚಾಗಿದ್ದರೂ ಜನ ವಸತಿ ಕಡೆ ಬರುವುದು ಕಡಿಮೆ. ಆದರೆ ಉಜ್ಜನಿ ಬೆಟ್ಟದ ಅರಣ್ಯ ತಪ್ಪಲಿನಲ್ಲಿ ಬಹುತೇಕ ಗ್ರಾಮಗಳಿದ್ದು ಅನೇಕ ಜನರು ತೋಟದ ಮನೆಗಳಲ್ಲಿ ವಾಸವಾಗಿರುವ ಕಾರಣ ಚಿರತೆ ಆಹಾರಕ್ಕಾಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ ಎನ್ನಲಾಗಿದೆ.

ಹುಲ್ಕುಡಿ ಹಾಗೂ ಮಾಕಳಿ ಅರಣ್ಯ ಪ್ರದೇಶದಲ್ಲಿ ಬೋನುಗಳಿಟ್ಟು ಚಿರತೆಗಳನ್ನು ಸೆರೆಹಿಡಿಯಲಾಗುತ್ತಿದೆ. ಉಜ್ಜನಿ ಬೆಟ್ಟದ ಅರಣ್ಯ ತಪ್ಪಲಿನ ಗ್ರಾಮಗಳಲ್ಲಿ ಒಂಟಿ ಮನೆಗಳೆ ಹೆಚ್ಚಾಗಿರುವ ಕಾರಣ ಚಿರತೆ ದಾಳಿಯಾಗುತ್ತಿದೆ. ಈ ಭಾಗದಲ್ಲಿ ಸಹ ಬೋನು ಇಡಲಾಗುವುದು. ದಾಳಿಗೆ ಸತ್ತ ಕರುವಿನ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net