ಚಿರತೆ ದಾಳಿಗೆ ಹಸು ಬಲಿ

cheetha
Published on

ಬೆಳ್ತಂಗಡಿ: ಮರೋಡಿ ಗ್ರಾಮದ ನಡುಚ್ಚೂರು ಎಂಬಲ್ಲಿ ಚಿರತೆ ದಾಳಿ ಮಾಡಿ ಹಸುವನ್ನು ಬಲಿ ಪಡೆದಿದೆ.

ದಿವಾಕರ ಹೆಗ್ಡೆ ಎಂಬುವರಿಗೆ ಸೇರಿದಮ ಹಸುವಿನ ಮೇಲೆ ದಾಳಿ ಮಾಡಿದ ಚಿರತೆ, ಅರ್ಧ ದೇಹವನ್ನು ತಿಂದು ಹಾಕಿದೆ. ಕೆಲ ದಿನಗಳ ಹಿಂದೆ ಹರೀಶ್ ಹೆಗ್ಡೆ ಎಂಬುವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿತ್ತು.

ಮೂರು ದಿನಗಳ ಹಿಂದೆ ಕುತ್ಲೂರಿನ ಬಜಿಲಪಾದೆಯಲ್ಲಿ ಚಿರತೆ ಪತ್ತೆಯಾಗಿತ್ತು. ಅದೇ ಚಿರತೆ ಇಲ್ಲಿಯೂ ದಾಳಿ ಮಾಡಿರುವ ಶಂಕೆಯಿದೆ. ಬಜಿಲಪಾದೆಯಲ್ಲಿ ಬೋನು ಇಟ್ಟಿದ್ದೇವೆ. ನಡುಚ್ಚೂರು ಪರಿಸರದಲ್ಲಿಯೂ ಬೋನು ಇಟ್ಟು, ಚಿರತೆ ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ ಎಂದು ವೇಣೂರು ವಲಯ ಅರಣಾಧಿಕಾರಿ ಮಹೀಂ ಜನ್ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಗ್ರಾಮಸ್ಥರು ತಿಳಿಸಿದ್ದು ತಕ್ಷಣ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net