ಬೋನಿಗೆ ಬೀಳದ ಚಿರತೆ

Oplus_0
Oplus_0
Published on

ಯಳಂದೂರು:ತಾಲೂಕಿನ ಮಲ್ಲಿಗೆಹಳ್ಳಿ, ಶಿವಕಳ್ಳಿ, ವಡಗೆರೆ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವಾರದಿಂದಲೂ ಈ ಗ್ರಾಮಗಳಲ್ಲಿ ಚಿರತೆ ಸಂಚರಿಸುತ್ತಿದ್ದು, ಹಸು, ಕರು, ಮೇಕೆ, ಸಾಕು ನಾಯಿಗಳ ಮೇಲೆ ದಾಳಿ ಮಾಡಿದೆ. ಈ ಗ್ರಾಮಗಳಲ್ಲಿ ಕತ್ತಲಾದರೆ ಚಿರತೆ ತನ್ನ ಕಾರ್ಯಾಚರಣೆ ಆರಂಭಿಸುತ್ತದೆ. ರೈತರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೆರೆ ಕಾರ್ಯಾಚರಣೆ: ಚಿರತೆ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಶಿವಕಳ್ಳಿ ಹಾಗೂ ವಡಗೆರೆ ಗ್ರಾಮದಲ್ಲಿ ಬೋನು ಇರಿಸಿದ್ದಾರೆ. ಸೆರೆ ಕಾರ್ಯಾಚರಣೆ ಆರಂಭಿಸಿದ್ದರೂ ಚಾಲಾಕಿ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೇಹಣ್ಣು ತಿನ್ನಿಸುತ್ತಿದೆ. ಇನ್ನಷ್ಟು ಕಡೆ ಇಲಾಖೆಯವರು ಬೋನು ಇರಿಸಿ ಇದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಚುರುಕುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net