ಜೀರೋ ವಿದ್ಯುತ್​ ಬಿಲ್​ಗೆ ಹರ್ಷ

ಜ್ಯೋತಿ ಗ್ಯಾರಂಟಿ ಯೋಜನೆಯಡಿ 2.10 ಲಕ್ಷ ಮಂದಿ ನೋಂದಣಿ
griha-jZero Vidyut Billge Harshayothi1
Published on


ಜ್ಯೋತಿ ಗ್ಯಾರಂಟಿ ಯೋಜನೆಯಡಿ 2.10 ಲಕ್ಷ ಮಂದಿ ನೋಂದಣಿ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ರಾಜ್ಯ ಸರ್ಕಾರದ ಮಹತ್ವಾಕಾಂ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯಡಿ ಇಲ್ಲಿಯವರೆಗೂ 2.10 ಲಕ್ಷ ಮಂದಿ ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 200 ಯೂನಿಟ್​ ಬಳಸುವ ಗ್ರಾಹಕರ ಸಂಖ್ಯೆ 3,28,670 ಇದ್ದು, ಈ ಪೈಕಿ ಬೆಸ್ಕಾಂ, ಗ್ರಾಮ ಒನ್​ ಕೇಂದ್ರದಲ್ಲಿ 92,833, ಸೇವಾ ಸಿಂಧುವಿನ ಕೇಂದ್ರದಲ್ಲಿ ಗ್ರಾಹಕರು 1,17,168 ನೋಂದಾಯಿಸಿಕೊಂಡಿದ್ದಾರೆ.
ಚುನಾವಣಾ ಪೂರ್ವ ಗ್ಯಾರಂಟಿ ಯೋಜನೆಗಳ ಪೈಕಿ 200 ಯೂನಿಟ್​ ವಿದ್ಯುತ್​ ಬಳಕೆ ಉಚಿತ ಎನ್ನುವುದು ರಾಜ್ಯ ಕಾಂಗ್ರೆಸ್​ನ ಪ್ರಮುಖ ೂಷಣೆ. ಇದನ್ನು ಅಧಿಕಾರಕ್ಕೆ ಬರುತಿದ್ದಂತೆ ಅನುಷ್ಠಾನಗೊಳಿಸಿದ್ದು, ಆಗಸ್ಟ್​ನಿಂದ ಅನೇಕ ಗ್ರಾಹಕರಿಗೆ ಶೂನ್ಯ ದರದ ಬಿಲ್​ ಬಂದಿದೆ. ಇನ್ನು ನಿಯಮಾನುಸಾರ ಗ್ರಾಹಕರು ಪ್ರತಿ ತಿಂಗಳ 27 ರೊಳಗೆ ಹೆಸರು ನೋಂದಾಯಿಸಿಕೊಂಡಾಗ, ಮುಂಬರುವ ತಿಂಗಳಿಂದ ಅರ್ಹರಿಗೆ ಉಚಿತ ಸೇವೆಯ ಸೌಲಭ್ಯ ಸಿಗಲಿದೆ.

ಹಲವರಿಗೆ ಖುಷಿ, ಕೆಲವರಿಗೆ ಬೇಸರ:
ಈಗಾಗಲೇ ಬೆಸ್ಕಾಂ ಸಿಬ್ಬಂದಿ ಮನೆ ಮನೆಗೂ ತೆರಳಿ ವಿದ್ಯುತ್​ ಬಳಕೆಯ ಬಿಲ್​ ಅನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಇದೇ ವೇಳೆ 200 ಯೂನಿಟ್​ ಒಳಗೆ ಬಳಕೆಯ ಕುಟುಂಬದವರು ಶುಲ್ಕ ಮನ್ನಾ ಆಗಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ವಾರ್ಷಿಕ ಸರಾಸರಿ ಲೆಕ್ಕದಂತೆ ವಿದ್ಯುತ್​ ಹೆಚ್ಚುವರಿ ಬಳಕೆಯ ಗ್ರಾಹಕರಿಗೆ ಬಿಲ್​ ಬೇಸರ ತರಿಸಿದೆ. ಒಂದು ವರ್ಷದ ಪ್ರಾರಂಭದ ಎರಡ್ಮೂರು ತಿಂಗಳಿನ ಅವಧಿಯಲ್ಲಿ 50ರಿಂದ 60 ಯೂನಿಟ್​ ಬಳಸುತ್ತಿದ್ದ ಹೊಸ ಮನೆ, ಸಣ್ಣ ಕೊಠಡಿಗಳಲ್ಲಿ ವಿದ್ಯುತ್​ ಉಪಕರಣಗಳ ಅಳವಡಿಕೆಯಿಂದ ಯೂನಿಟ್​ ಬಳಕೆಯ ಪ್ರಮಾಣವು ಹೆಚ್ಚಾಗಿದೆ. ಇದರಿಂದ ಸರಾಸರಿಯಲ್ಲಿ ಹೆಚ್ಚಿನ ವ್ಯತ್ಯಾಸದಿಂದ ಪೂರ್ಣ ಪ್ರಮಾಣದಲ್ಲಿ ಬಿಲ್​ ಪಾವತಿಸುವಂತಾಗಿದೆ.

ಗೃಹ ಲ್ಮ ಯೋಜನೆಯ ಲೆಕ್ಕ:
ಗೃಹ ಲ್ಮ ಯೋಜನೆಯಡಿ ಕೇವಲ 12 ದಿನಗಳ ಅವಧಿಯಲ್ಲಿ ಬರೋಬ್ಬರಿ 1.85 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ ಸೇವಾ ಕೇಂದ್ರಗಳ ಎದುರು ನೋಂದಣಿಗಾಗಿ ಅರ್ಜಿದಾರರು ಮುಗಿ ಬಿದ್ದಿದ್ದು ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 6 ಕರ್ನಾಟಕ ಒನ್​ ಕೇಂದ್ರ,. 155 ಗ್ರಾಮ ಒನ್​ ಕೇಂದ್ರ ಹಾಗೂ 157 ಬಾಪೂಜಿ ಕೇಂದ್ರಗಳು, ನಗರಸಭೆ ವ್ಯಾಪ್ತಿಯ 24 ಕೇಂದ್ರಗಳು ಸೇರಿದಂತೆ 342 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಭಾಗದಲ್ಲಿ 28,420 ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್​) 2,79,968 ಹಾಗೂ ಎಪಿಎಲ್​ ಕಾರ್ಡುಗಳು 27,029 ಸೇರಿದಂತೆ 3,27,417 ಕಾರ್ಡುಗಳಿವೆ. ಈ ಪೈಕಿ ಮಹಿಳಾ ಯಜಮಾನಿಕೆಯ ಹೆಸರಿನ ಕಾರ್ಡುಗಳಿಗೆ ಸಂಬಂಧಿಸಿದಂತೆ 27,029 ಎಎವೈ ಕಾರ್ಡ್​, 2,59,854 ಬಿಪಿಎಲ್​ ಮತ್ತು 12,798 ಎಪಿಎಲ್​ ಕಾರ್ಡ್​ ಸೇರಿದಂತೆ 2,99,677 ಕಾರ್ಡುಗಳಿವೆ. ಈ ಪೈಕಿ ಜಿಲ್ಲೆಗೆ ಗೃಹಲ್ಮ 2,85,020 ನೋಂದಣಿ ಗುರಿಯನ್ನು ಸರ್ಕಾರವು ನೀಡಿದೆ.

ತಾಲೂಕು 200 ಯೂನಿಟ್​ ಬಳಕೆ ಗ್ರಾಹಕರು ನೋಂದಾಯಿತರು
ಚಿಕ್ಕಬಳ್ಳಾಪುರ 64,380 63,644
ಗೌರಿಬಿದನೂರು 73,491 42,136
ಬಾಗೇಪಲ್ಲಿ 43,842 25,071
ಗುಡಿಬಂಡೆ 14,481 11,259
ಶಿಡ್ಲಟ್ಟ 56,045 24,291
ಚಿಂತಾಮಣಿ 76,431 43,600

ಕೋಟ್​))))
ಮೊದಲು 900ರಿಂದ 1200 ರವರೆಗೂ ವಿದ್ಯುತ್​ ಬಿಲ್​ ಬರುತ್ತಿತ್ತು. ಇತ್ತೀಚೆಗೆ ದರ ಏರಿಕೆಯಿಂದ ಮತ್ತಷ್ಟು ದುಬಾರಿ ಹಣ ಪಾವತಿಸಬೇಕಾಗಿತ್ತು. ಈಗ ನಿಯಮಾನುಸಾರ 200 ಯೂನಿಟ್​ ಶುಲ್ಕ ಮನ್ನಾ ಆಗಿದೆ. ಇದು ಖುಷಿಯ ವಿಚಾರ.

ಗಿರಿಜಾ, ಗೃಹಿಣಿ, ಚಿಕ್ಕಬಳ್ಳಾಪುರ

ಹೊಸ ಮನೆಗೆ ಕಳೆದ 8 ತಿಂಗಳ ಹಿಂದೆ ವಿದ್ಯುತ್​ ಸಂಪರ್ಕ ಪಡೆಯಲಾಗಿದೆ. ಮೊದಲು ವಿದ್ಯುತ್​ ಬಳಕೆ ತುಂಬಾ ಕಡಿಮೆ ಇತ್ತು. ಈಗ ಕುಟುಂಬ ಸ್ಥಳಾಂತರಗೊಂಡ ಬಳಿಕ ಹೆಚ್ಚಾಗಿದೆ. ಆದರೆ, ಬೆಸ್ಕಾಂನ ವಾರ್ಷಿಕ ಸರಾಸರಿ ಲೆಕ್ಕದಲ್ಲಿ ಹೆಚ್ಚುವರಿ ವಿದ್ಯುತ್​ ಬಳಕೆ ಎಂಬುದಾಗಿ ಪರಿಗಣಿಸಿ, ಉಚಿತ ಸೇವೆಯ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. 1 ಸಾವಿರ ಬಿಲ್​ ಬಂದಿದೆ.

ನಾರಾಯಣಸ್ವಾಮಿ, ಗ್ರಾಹಕ, ಅಣಕನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net