

ಕುಶಾಲನಗರ:
ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಯ ಶೇಕಡ 25ರ ಅನುದಾನದಲ್ಲಿ ದೊಡ್ಡಬೆಟ್ಟಗೇರಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಯ 11 ಕುಟುಂಬಗಳಿಗೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸಹಾಯಧನ ರೂಪದ ಚೆಕ್ ಅನ್ನು ಪಲಾನುಭವಿಗಳಿಗೆ ಸೋಮವಾರ ವಿತರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ. ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಸದಸ್ಯರಾದ ರಮೇಶ್, ಲಕ್ಷ್ಮಣ್, ಶಿವಪ್ಪ, ಕಾರ್ಯದರ್ಶಿ ಆರ್. ಕುಮಾರ ಸ್ವಾಮಿ ಹಾಗೂ ಫಲಾನುಭವಿಗಳು ಇದ್ದರು.