

ವಿರಾಜಪೇಟೆ: ಕೇರಳದಿಂದ ಅಸುರಕ್ಷಿತ ಆಹಾರ ಪದಾರ್ಥ ಸಾಗಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವಿರಾಜಪೇಟೆ ಕೇರಳ ಗಡಿ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಅಕಾರಿಗಳು ಸಮಗ್ರ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಕಾರದ ಅಕಾರಿ ಡಾ.ಅನಿಲ್ ಧವನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಕೇರಳದಿಂದ ಅಸುರಕ್ಷಿತ ಆಹಾರ ಪದಾರ್ಥ ವಿರಾಜಪೇಟೆ ತಾಲೂಕಿನ ಹಲವು ಕಡೆ ವ್ಯಾಪಾರ ಹಾಗೂ ಸರಬರಾಜಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರು ಇತ್ತೀಚೆಗೆ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಕಾರದ ಅಕಾರಿ ಡಾ.ಅನಿಲ್ ಧವನ್ ನೇತೃತ್ವದಲ್ಲಿ ಸಭೆ ನಡೆಸಿ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅಕಾರಿಗಳು ವಿರಾಜಪೇಟೆಯ ಕೆಲವು ಅಂಗಡಿಗಳಲ್ಲಿ ಇಲಾಖೆಯ ಅಕಾರಿಗಳು 90 ಸ್ಯಾಂಪಲ್ ತಿಂಡಿಗಳನ್ನು ಎ್ಎಸ್‌ಲ್‌ಗೆ ಕಳುಹಿಸಿದ್ದರು. ಅದರಲ್ಲಿ 31 ತಿಂಡಿಗಳು ಅಸುರಕ್ಷಿತ ಎಂದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳದಿಂದ ಮಾಕುಟ್ಟ ಮುಖಾಂತರ ವಿರಾಜಪೇಟೆಗೆ ಬರುವ ಆಹಾರ ತಿನಿಸುಗಳ ಗುಣಮಟ್ಟ ಪರಿಶೀಲನೆಯ ಕಾರ್ಯಾಚರಣೆ ನಡೆಸಲಾಯಿತು.