ಸ್ಥಳ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಿ

Paidoddi GP Building Issue
ಪೈದೊಡ್ಡಿ ಗ್ರಾಪಂ ಕಟ್ಟಡ ನಿರ್ಮಾಣ ತಕರಾರಿಗೆ ಸಂಬಂಧಿಸಿದಂತೆ ಪಿಡಿಒಗೆ ಲಿಂಗಸುಗೂರು ತಾಪಂ ಇಒ ಅಮರೇಶ ಯಾದವ್ ಪತ್ರ ಬರೆದಿರುವುದು.
Published on

ಗುರುಗುಂಟಾ: ಪೈದೊಡ್ಡಿ ಗ್ರಾಪಂ ಕಟ್ಟಡ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಪಿಡಿಒ ಭೀಮಣ್ಣಗೆ ತಾಪಂ ಇಒ ಅಮರೇಶ ಯಾದವ್ ಪತ್ರ ಬರೆದು ಕ್ರಮಕ್ಕಾಗಿ ಸೂಚಿಸಿದ್ದಾರೆ.

‘ಪೈದೊಡ್ಡಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ವಿಘ್ನ’ ಶೀರ್ಷಿಕೆಯಡಿ ಅ.23 ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ನಿಯಮಾನುಸಾರ ಕ್ರಮಕೈಗೊಂಡು ದೂರುದಾರ ಭೀಮರಾಯಗೌಡಗೆ ಹಿಂಬರಹ ನೀಡಬೇಕು. ಈ ಕುರಿತು ತಾಪಂ ಕಚೇರಿಗೆ ವರದಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 30 ವರ್ಷಗಳ ಹಿಂದೆ ಕೆಲವು ಷರತ್ತು ಆಧರಿಸಿ ಜಮೀನಿನ ಮಾಲೀಕ ಭೀಮರಾಯಗೌಡ ಅವಕಾಶ ಕಲ್ಪಿಸಿದ್ದರು. ಆದರೆ, ಷರತ್ತುಗಳಿಗೆ ಇಲಾಖೆಯಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ.

ಈ ಕುರಿತು ಭೀಮರಾಯಗೌಡ 2023ರ ಆ.23 ರಂದು ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ತಾಪಂಗೆ ದೂರು ಸಲ್ಲಿಸಿದ್ದರು. ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಧಿಕಾರಿಗಳು ಪಿಡಿಯೊಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net