

ಆಲ್ದೂರು: ಸರ್ಕಾರಿ ಪ್ರೌಢಶಾಲೆ ಗೇಟ್ ಮುಂಭಾಗ ಜಲಜೀವನ್ ಮಿಷನ್ ಗುತ್ತಿಗೆದಾರರು ಬೋರೆವೆಲ್ ಕೊರೆದ ಪರಿಣಾಮ ಶಾಲೆ ಕೊಠಡಿಗಳು ಬಿರುಕುಬಿಟ್ಟಿರುವುದನ್ನು ಗುರುವಾರ ತಾಪಂ ಇಒ ಪೂರ್ಣಿಮಾ, ಬಿಇಒ ರಿತೀಶ್, ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳು ಪರಿಶೀಲಿಸಿದರು.
ಗ್ರಾಪಂ ಹಾಗೂ ಶಾಲಾ ಆಡಳಿತ ಮಂಡಳಿ ಅನುಮತಿ ಪಡೆಯದೆ ರಾತ್ರಿ ವೇಳೆ ಶಾಲೆ ಮುಂಭಾಗ ಬೋರ್‌ವೆಲ್ ಕೊರೆದಾಗ ಶಾಲೆಯ ನಾಲ್ಕು ಕೊಠಡಿಗಳು ಬಿರುಕು ಬಿಟ್ಟಿದ್ದವು. ಈ ಕುರಿತು ಶಿಕ್ಷಕರು ತಾಪಂ ಹಾಗೂ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಸ್ಥಳ ಪರಿಶೀಲನೆ ನಂತರ ಮಾತನಾಡಿದ ಪೂರ್ಣಿಮಾ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೇತನ್‌ಕುಮಾರ್, ಸಹಾಯಕ ಇಂಜಿನಿಯರ್‌ಗಳಾದ ಸಂತೋಷ್ ಕಾಮತ್,ಪವನ್, ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಾಯಕ್, ಮುಖ್ಯಶಿಕ್ಷಕ ಸುರೇಶ್, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಪಿಡಿಒ ಶಂಶುನ್ ನಹರ್, ಸಾಮಾಜಿಕ ಕಾರ್ಯರ್ಕ ಸುಪ್ರೀತ್, ಅಕ್ಬರ್ ಆಲಿ, ಮಣಿಕಂಠ, ಸಂತೋಷ್ ಇದ್ದರು.