

ಚಿತ್ರದುರ್ಗ
ಚಿತ್ರದುರ್ಗ ತಾಲೂಕು ಸೊಂಡೇಕೊಳ ಗ್ರಾಪಂ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನೀಡಿದ್ದೇನೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಸೊಂಡೇಕೊಳದಲ್ಲಿ ಮಂಗಳವಾರ,ಈ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಂದಾಜು 14.90 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ನನ್ನ ಕ್ಷೇತ್ರದ ಗ್ರಾಮೀಣ ಭಾ ಗಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ.
ಉಪ್ಪನಾಯಕನಹಳ್ಳಿ ಶ್ರೀ ದುರ್ಗಮ್ಮ,ಹುಲಿಗೆಮ್ಮ ತಿಮ್ಮಪ್ಪ ಹಾಗೂ ಶ್ರೀ ಪಾಡುರಂಗ ದೇವಸ್ಥಾನಗಳ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಅನುದಾನ ಕೊಟ್ಟಿದ್ದೇನೆ. ಓಬನಹಳ್ಳಿಯಲ್ಲಿ ನಬಾರ್ಡ್ ಯೋಜನೆಯಡಿ 22 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ 2 ನೂತನ ಕೊಠಡಿ ಮತ್ತು 3 ಕೋಟಿ ರೂ.ವೆಚ್ಚದಲ್ಲಿ 3 ಚೆಕ್ ಡ್ಯಾಂ.ನಿರ್ಮಾಣವಾಗುತ್ತಿದೆ.
ಸೊಂಡೇಕೊಳದಲ್ಲಿ ತಡೆಗೋಡೆಗೆ 15 ಲಕ್ಷ ರೂ.,ಎರೇಹೊಣೆ ರಸ್ತೆ ಡಾಂಬರೀಕರಣಕ್ಕೆ 75 ಲಕ್ಷ ರೂ.,ಸೊಂಡೇಕೊಳದಿಂದ ಉಪ್ಪ ನಾಯಕನಹಳ್ಳಿ ರಸ್ತೆ ಕಾಮಗಾರಿಗೆ 80 ಲಕ್ಷ ರೂ.,ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕುಕ್ಕಾವಾಡೇಶ್ವರಿ ದೇವಾಲಯಗಳ ಅಭಿವೃದ್ಧಿಗೆ ತಲಾ 5 ಲಕ್ಷ ರೂ.,ಎಸ್‌ಸಿ ಕಾಲನಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣಕ್ಕೆ 10 ಲಕ್ಷ ರೂ.,ಸರ್ಕಾರಿ ಹಳ್ಳಕ್ಕೆ ಎರಡು ಚೆಕ್ ಡ್ಯಾಂಗಳನ್ನು ನಿರ್ಮಿಸಲು 1.80 ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ.
ನಂದಿಪುರದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಚೆಕ್ ಡ್ಯಾಂ ಮತ್ತು 5 ಲಕ್ಷ ರೂ.ವೆಚ್ಚದಲ್ಲಿ ಬಾಕ್ಸ್ ಚರಂಡಿ. ಗೊಡಬನಾಳ್‌ನಿಂದ ಉಪ್ಪ ನಾಯಕನಹಳ್ಳಿವರೆಗೆ 4 ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗಳು ಗುಣಮಟ್ಟದಿಂದರ ಬೇಕೆಂದು ಖಡಕ್ ಸೂಚಿಸಿರುವುದಾಗಿ ತಿಳಿಸಿದರು.
ಈ ಪ್ರದೇಶದಲ್ಲಿ 15 ಕ್ಕಿಂತ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳಿಗೆ ಅನುಕೂಲವಾಗಲಿದೆ. ಅನ್ಯಾಳ್ ಮತ್ತು ನಂದಿಪುರ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಲಾಗಿದೆ.ಖಾತೆ ಹೊಂದಿರುವಂಥ ವಸತಿ ಯೋಜನೆ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳ ಬೇಕು.
ಪಿಂಚಣಿ ಸಮಸ್ಯೆ ಇದ್ದರೆ ಸರಿಪಡಿಸುವುದಾಗಿ ಹೇಳಿದ ಶಾಸಕರು,ನಿಮ್ಮೆಲ್ಲ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವುದಾಗಿ ಹೇಳಿ ದರು. ಗ್ರಾಪಂ ವ್ಯಾಪ್ತಿಯ 1850 ಕುಟುಂಬ ಗಳಿಗೆ ಹಸಿ ಕಸ,ಒಣ ಕಸ ಸಂಗ್ರಹಿಸುವ ಬುಟ್ಟಿಗಳನ್ನು ವಿತರಿಸಿ,ಸ್ವಚ್ಚತಾ ವಾಹಿನಿಯ ವಾಹನಕ್ಕೆ ಚಾಲನೆ ನೀಡಿದರು. ತಾಪಂ ಇಒ ಹನು ಮಂತಪ್ಪ,ಬಿಇಒ ತಿಪ್ಪೇಸ್ವಾಮಿ,ಆರ್‌ಐ ಶರಣಪ್ಪ,ಗ್ರಾಪಂ ಅಧ್ಯಕ್ಷೆ ಭಾರತಮ್ಮ,ಪಿಡಿಒ ಅಂಜಿನಪ್ಪ,ಉಪಾಧ್ಯಕ್ಷರು,ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
(ಸಿಟಿಡಿ 18 ಎಂಎಲ್‌ಎ)
ಚಿತ್ರದುರ್ಗ ತಾಲೂಕು ಸೊಂಡೇಕೊಳದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕೆಲಸಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು. ತಾಪಂ ಇಒ ಹನುಮಂತಪ್ಪ,ಬಿಇಒ ತಿಪ್ಪೇಸ್ವಾಮಿ,ಆರ್‌ಐ ಶರಣಪ್ಪ,ಗ್ರಾಪಂ ಅಧ್ಯಕ್ಷೆ ಭಾರತ ಮ್ಮ,ಪಿಡಿಒ ಅಂಜಿನಪ್ಪ ಇತರರ ಇದ್ದರು.
-----