ಪೊಲೀಸ್​ಗೆ ಮಕ್ಮಲ್ ಟೋಪಿ

cyber crime
Published on

ಹುಬ್ಬಳ್ಳಿ: ಕೈಗೆಟಕುವ ದರದಲ್ಲಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ ಅಪರಿಚಿತ ವ್ಯಕ್ತಿಯೊಬ್ಬ, ನಗರದ ಪೊಲೀಸರೊಬ್ಬರಿಂದ 14.38 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದರ ಕುರಿತು ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಮಳಿಮಠ ವಂಚನೆಗೊಳಗಾದವರು. ಮಂಜುನಾಥರನ್ನು ಸಂರ್ಪಸಿದ ವ್ಯಕ್ತಿಯೊಬ್ಬ ಸಂತೋಷ ಹಾವೇರಿಶೆಟ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ನಗರದಲ್ಲಿ ಕೈಗೆಟಕುವ ದರದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾನೆ. ಈ ಮಾತು ನಂಬಿದ ಮಂಜುನಾಥ, ತಮ್ಮ ಬ್ಯಾಂಕ್ ಖಾತೆಯಿಂದ 6 ಲಕ್ಷ ರೂ. ಹಾಗೂ ಯುಪಿಐ ಮೂಲಕ 8.38 ಲಕ್ಷ ರೂ. ವರ್ಗಾಯಿಸಿ ವಂಚನೆಗೊಳಗಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net