ಮಧ್ಯವರ್ತಿಗಳನ್ನು ನಂಬಿದರೆ ಮೋಸ ಗ್ಯಾರಂಟಿ

19 MDG 5
Published on

ಮುಂಡರಗಿ: ವಿಜ್ಞಾನ ಮತ್ತು ತಂತ್ರಜ್ಞಾನಗಳು ವಿಸ್ತಾರವಾಗಿ ಬೆಳೆದಿದೆ. ಸರ್ಕಾರಿ ಕೆಲಸಗಳಿಗೆ ಮಧ್ಯವರ್ತಿಗಳನ್ನು ಅವಲಂಬಿಸಿದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಮಧ್ಯವರ್ತಿಗಳನ್ನು ನಂಬಿ ವಂಚನೆಗೆ ಒಳಗಾಗದಿರಿ ಎಂದು ಲೋಕಾಯುಕ್ತ ಪಿಎಸ್‌ಐ ಪರಮೇಶ್ವರ ಕೌಟಿ ಹೇಳಿದರು.

ಪಟ್ಟಣದ ಶ್ರೀ ಜಗದ್ಗರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಲೋಕಾಯುಕ್ತರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿಯಂತ್ರಣ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸು ಇರುತ್ತದೆ. ಆದ್ದರಿಂದ ಯುವಕರು ದೈಹಿಕ ಸದೃಢತೆಗೆ ಹೆಚ್ಚು ಮಹತ್ವ ನೀಡಬೇಕು. ನಿಯಮಿತ ವ್ಯಾಯಾಮ ಹಾಗೂ ಮತ್ತಿತರ ದೈಹಿಕ ಚಟುವಟಿಕೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಆರ್. ಚಿಗರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯಾ ಹಳ್ಳಿ ಪ್ರಾರ್ಥಸಿದರು. ಉಪನ್ಯಾಸಕಿ ಕಾವೇರಿ ಭೋಲಾ ಕಾರ್ಯಕ್ರಮ ನಿರೂಪಿಸಿದರು. ಲೋಕಾಯುಕ್ತ ಇಲಾಖೆಯ ತಿಮ್ಮಾನಾಯಕ, ನಾಗಮ್ಮನವರ, ಡಾ. ಮಿಟ್ಯಾ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net