

ಬೆಂಗಳೂರು: ಮೈ ಮೇಲೆ ದೇವರು ಬಂದಂತೆ ನಟಿಸಿದ ಮಂತ್ರವಾದಿಯೊಬ್ಬ ಕುಟುಂಬದ ಕಷ್ಟ ಪರಿಹರಿಸುವುದಾಗಿ ಮಹಿಳೆಯನ್ನು ನಂಬಿಸಿ 27 ಕೋಟಿ ರೂ.ಮೌಲ್ಯದ ಆಭರಣ, ನಿವೇಷನ ಹಾಗೂ ನಗದು ಪಡೆದು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ರಾಮಮೂರ್ತಿನಗರದ ಎನ್ಆರ್ಐ ಲೇಔಟ್ ನಿವಾಸಿ 48 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಈ ಕುರಿತು ಅವರು ಕೊಟ್ಟ ದೂರಿನ ಅನ್ವಯ ಬಂಗಾರಪೇಟೆ ಮೂಲದ ಮಂತ್ರವಾದಿ ನಾಗರಾಜ್, ಆತನ ಪತ್ನಿ ಹಾಗೂ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.