ಜಡ್ಜ್ ಮನೇಲಿ ಮದ್ವೆ ಇದೆ ಎನ್ನುತ್ತ 120 ಸೀರೆ ಎತ್ಕೊಂಡು ಹೋದವಳೀಗ ಪೊಲೀಸರ ಅತಿಥಿ!

cheating case
Published on

ಬೆಂಗಳೂರು: ನ್ಯಾಯಾಧೀಶರ ಮನೆಯಲ್ಲಿ ಮದುವೆ ಇದೆ. ಸೀರೆ ತೋರಿಸಿ ಎಂದು ಪೋಸ್​ ನೀಡುತ್ತ 120 ಸೀರೆಗಳನ್ನು ಆಯ್ಕೆ ಮಾಡಿದಳಾಕೆ. ಬಳಿಕ ಅವೆಲ್ಲವನ್ನೂ ಎತ್ತಿಕೊಂಡು, ಮನೆಯವರಿಗೆ ತೋರಿಸಿ ಬಂದು ಹಣ ಕೊಡುವೆ ಎಂದು ಹೋದವಳು ಈಗ ಪೊಲೀಸರ ಅತಿಥಿ! ಬಂಧಿತಳನ್ನು ಶಶಿಕಲಾ ಎಂದು ಗುರುತಿಸಲಾಗಿದೆ.

ವಂಚನೆ ಎಸಗಿದ್ದು ಹೀಗೆ: ಸೀರೆ ಅಂಗಡಿಗೆ ಬಂದಿತ್ತೊಂದು ಫೋನ್ ಕರೆ. ಹಲೋ ನಾನು ಜಡ್ಜ್ ಮನೆಯಿಂದ ಮಾತನಾಡುತ್ತಿದ್ದೇನೆ. ನಮ್ಮ ಮನೇಲಿ ಮದುವೆ ಇದೆ. ಒಂದಷ್ಟು ಪಾಟೂರು ಪಟ್ಟೆ ಸೀರೆ ಬೇಕು. ನಮ್ಮ ಮನೆಯಿಂದ ಒಬ್ಬರನ್ನು ನಿಮ್ಮ ಅಂಗಡಿಗೆ ಕಳುಹಿಸುತ್ತಿರುವೆ ಎಂಬ ಸಂದೇಶದೊಂದಿಗೆ ಆ ಫೋನ್​ ಕರೆ ಕಟ್ ಆಗಿತ್ತು.

ಕೆಲ ಹೊತ್ತಿನ ಬಳಿಕ ಈ ಮಹಿಳೆ ಅಂಗಡಿಗೆ ಎಂಟ್ರಿ ಕೊಟ್ಟಿದ್ದಳು. ಸೀರೆಗಳನ್ಹು ಬಳಿಕ ಸಂಪಿಗೆ ಹಳ್ಳಿಯಲ್ಲಿರುವ ಅಪಾರ್ಟ್​ಮೆಂಟ್​ಗೆ ತರಿಸಿಕೊಂಡಿದ್ದಳು. ಆದರೆ ಹಣ ಪಾವತಿಸಿರಲಿಲ್ಲ. ಸೀರೆಗಳ ಒಟ್ಟು ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ವಂಚನೆ ಅರಿವಿಗೆ ಬರುತ್ತಲೇ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net