

ಬೆಂಗಳೂರು : ತಿಂಗಳಿಗೆ ಶೇ.2.5 ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಹಣ ಪಡೆದು ಮೋಸ ಮಾಡುತ್ತಿದ್ದ ವಂಚಕ ಕಂಪನಿ ಬೆಳಕಿಗೆ ಬಂದಿದ್ದು, ನೂರಾರು ಮಂದಿಗೆ ಮೋಸಕ್ಕೆ ಒಳಗಾಗಿದ್ದಾರೆ. ಬಸವೇಶ್ವರನಗರದ ಎಂ.ದೀಪು ಎಂಬಾಕೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್‌ನಲ್ಲಿನ ಐಶ್ವರ್ಯಲಕ್ಷ್ಮಿ ಚಿಟ್ಸ್ ಫಂಡ್ ಪ್ರೈ.ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪಟೇಲ್ ಆನಂದ್, ನಿರ್ದೇಶಕಿ ಆತನ ಪತ್ನಿ ಗಂಗಾಂಬಿಕೆ, ಮಗಳು ಗೀತಾ, ಪುಷ್ಪ ಮತ್ತು ನೌಕರರಾದ ಉಮಾಶಂಕರ್ ಸೇರಿದಂತೆ 9 ಮಂದಿ ವಿರುದ್ಧ ಎ್ಐಆರ್ ದಾಖಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಖಾಸಗಿ ಕಂಪನಿ ನೌಕರ ಪಟೇಲ್ ಆನಂದ್, 2018ರಲ್ಲಿ ಐಶ್ವರ್ಯ ಲಕ್ಷ್ಮಿ ಚಿಟ್ಸ್ ಫಂಡ್ ಕಂಪನಿ ತೆರೆದು 1 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 2500 ರೂ. ಬಡ್ಡಿ ಕೊಡುವುದಾಗಿ ಆಮಿಷ ಒಡ್ಡಿದ್ದ. ಇದನ್ನು ನಂಬಿದ ನೂರಾರು ಮಂದಿ ಹೂಡಿಕೆ ಮಾಡಿದ್ದು, ೆಬ್ರವರಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಬಡ್ಡಿ ಜಮೆ ಮಾಡಿದ್ದಾನೆ. ಕರೊನಾ ಲಾಕ್‌ಡೌನ್ ನೆಪ ಹೇಳಿ ಬಡ್ಡಿ ಕೊಡುವುದನ್ನು ನಿಲ್ಲಿಸಿದ್ದ. ನೊಂದ ದೀಪು ಎಂಬಾಕೆ ದೂರು ನೀಡಿದ್ದು, ಒಬ್ಬರ ಹಿಂದೆ ಒಬ್ಬರಂತೆ ಬಂದು ದೂರು ನೀಡಿದ್ದಾರೆ. ಇದೇ ರೀತಿ ನೂರಾರು ಮಂದಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಂಪನಿಗೆ ಎಂಡಿ ಆಗಿದ್ದ ಪಟೇಲ್ ಆನಂದ್, ಪತ್ನಿ, ಮಕ್ಕಳು ಮತ್ತು ತನ್ನ ನೌಕರರನ್ನು ನಿರ್ದೇಶಕರಾಗಿ ನೇಮಕ ಮಾಡಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ : ತಿಂಗಳಿಗೆ ಶೇ.2.5 ಬಡ್ಡಿ ಯಾವ ರೀತಿ ಕೊಡುತ್ತಿರಾ ಎಂದು ಆರೋಪಿಯನ್ನು ಪ್ರಶ್ನೆ ಮಾಡಿದಾಗ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೆನೆ. ಅದರಿಂದ ಬಂದ ಹಣದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸುತ್ತಿದ್ದೆನೆ ಎಂದು ಹೇಳಿದ್ದಾನೆ. ಅದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಐಶ್ವರ್ಯ ಲಕ್ಷ್ಮಿ ಚಿಟ್ಸ್ ಫಂಡ್ ಪ್ರೈ.ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿರುವರು ಧೈರ್ಯವಾಗಿ ಜ್ಞಾನಭಾರತಿ ಠಾಣೆಗೆ ಬಂದು ದೂರು ನೀಡಿ. ಸಂಜೀವ್ ಎಂ.ಪಾಟೀಲ್-ಪಶ್ಚಿಮ ವಿಭಾಗ ಡಿಸಿಪಿ