11ಕ್ಕೆ ಚಾವಡಿ ವಿನಾಯಕ ಸ್ವಾಮಿ ವಾರ್ಷಿಕೋತ್ಸವ

vinayaka
Published on

ಎನ್.ಆರ್.ಪುರ: ಪಟ್ಟಣದ ಬಸ್‌ನಿಲ್ದಾಣ ಸಮೀಪದ ಚಾವಡಿ ವಿನಾಯಕ ಸ್ವಾಮಿ

ದೇವಸ್ಥಾನದಲ್ಲಿ 11ರಂದು ದೇಗುಲ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು

ದೇವಸ್ಥಾನ ಸಮಿತಿ ಕಾರ್ಯದರ್ಶಿ ವೈ.ಎಸ್.ರವಿ ತಿಳಿಸಿದ್ದಾರೆ. 11ರಂದು ಬೆಳಗ್ಗೆ 10ರಿಂದ ಕಲಾ

ಹೋಮ, 12.30ಕ್ಕೆ ಗಣಪತಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ

ವಿನಿಯೋಗ ನಡೆಯಲಿದೆ. ಸಂಜೆ 7 ಗಂಟೆಗೆ ಅಷ್ಟವಧಾನ ಸೇವೆ, ವಿಶೇಷ ಪೂಜೆ,

ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕಿನ ಬಾಳೆ ಗ್ರಾಮದ ನರಸೀಪುರದ ಶ್ರೀ ಪಾತಾಳ ನರಸಿಂಹಸ್ವಾಮಿ ಜಯಂತೋತ್ಸವ

ಮತ್ತು ರಜತ ಕವಚ ಧಾರಣೆ ಕಾರ್ಯಕ್ರಮ 11ರಂದು ನಡೆಯಲಿದೆ. ಶ್ರೀನರಸಿಂಹ ಜಯಂತಿ

ಮತ್ತು ರಜತ ಕವಚ ಧಾರಣೆ ಮಹೋತ್ಸವದ ಅಂಗವಾಗಿ ಪುಣ್ಯಾಹವಾಚನ, ಕಲಶಪೂಜೆ,

ಹೋಮ, ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net