

ಮುಂಡಗೋಡ: ಚವಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬಸಿರಾಬಿ ಮೌಲಾಸಾಬ ನದಾಫ್ ಶುಕ್ರವಾರ ಮರು ಆಯ್ಕೆಯಾಗಿದ್ದಾರೆ.
ಕಾರಣಾಂತರಗಳಿಂದ ಅಧ್ಯಕ್ಷೆ ಸ್ಥಾನಕ್ಕೆ ಬಸಿರಾಬಿ ರಾಜೀನಾಮೆ ನೀಡಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಕೊಂಡುಬಾಯಿ ವಿಠ್ಠು ಗಾವಡೆ ಹಾಗೂ ಬಸೀರಾಬಿ ನಾಮಪತ್ರ ಸಲ್ಲಿಸಿದ್ದರು. ಕೊಂಡು ಬಾಯಿ ಐದು ಮತ ಪಡೆದರೆ, ಬಸಿರಾಬಿ ಎಂಟು ಮತ ಪಡೆದು ಮರು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಶಂಕರ ಗೌಡಿ ಕಾರ್ಯ ನಿರ್ವಹಿಸಿದರು.
ಯಾಕೂಬ ಯಲಿವಾಳ, ಲೋಕಪ್ಪ ಕೋಣಕೇರಿ, ನಾರಾಯಣ ಮಾನಪ್ಪನವರ, ಫಕೀರಪ್ಪ ಕೋನಕೇರಿ, ಮುದಕಪ್ಪ, ನಿಂಗಪ್ಪ ಭದ್ರಾಪುರ, ಪೀರಪ್ಪ ನ್ಯಾಸರ್ಗಿ, ಅರ್ಜುನ ಜೋತೆಪ್ಪನವರ, ಅಮೃತ ಶಿಡ್ರೋಳ್ಳಿ, ಚಂದ್ರಶೇಖರ ಶಿಂಗ್ನಳ್ಳಿ, ರಾಜು ಶಿಂಗ್ನಳ್ಳಿ, ಲಕ್ಷ್ಮಣ ಶಿಂಗ್ನಳ್ಳಿ, ಅರ್ಜುನ ಭೋವಿವಡ್ಡರ, ರವಿ ವಾಲ್ಮೀಕಿ ಇತರರಿದ್ದರು.